ನವದೆಹಲಿ:ನಮೋ ಟಿವಿಯ ಲೋಗೋಗೆ ಮಾತ್ರ ಅನುಮತಿ ನೀಡಲಾಗಿದ್ದು, ಆ ಚಾನೆಲ್ನಲ್ಲಿ ಪ್ರಸಾರವಾಗುವ ವಿಷಯಕ್ಕೆ ಅನುಮತಿ ಪಡೆದಿಲ್ಲವೆಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ನಮೋ ಟಿವಿ ವಿವಾದ: ಚುನಾವಣಾಧಿಕಾರಿ ನೀಡಿದ್ರು ಸ್ಪಷ್ಟನೆ
ದಿನದ 24 ಗಂಟೆಯೂ ಪ್ರಸಾರವಾಗುವ ನಮೋ ಟಿವಿ ಚಾನೆಲ್ ಮೋದಿ ಸರ್ಕಾರ ಹಾಗೂ ಬಿಜೆಪಿಯ ಸಾಧನೆಗಳನ್ನು ಬಿತ್ತರಿಸುತ್ತದೆ. ಇದರ ಪ್ರಸಾರಕ್ಕೆ ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಪಡೆದಿಲ್ಲವೆಂದು ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ನಮೋ ಟಿವಿ
ದಿನದ 24 ಗಂಟೆಯೂ ಪ್ರಸಾರವಾಗುವ ನಮೋ ಟಿವಿ ಚಾನೆಲ್ ಮೋದಿ ಸರ್ಕಾರ ಹಾಗೂ ಬಿಜೆಪಿಯ ಸಾಧನೆಗಳನ್ನು ಬಿತ್ತರಿಸುತ್ತದೆ.ನಮೋ ಟಿವಿಯಲ್ಲಿ ಸದ್ಯ ಪ್ರಸಾರವಾಗುತ್ತಿರುವ ಯಾವುದೇ ಕಾರ್ಯಕ್ರಮಗಳ ಕುರಿತು ಅನುಮತಿಯನ್ನು ಪಡೆದಿಲ್ಲ ಎನ್ನುವುದು ತಿಳಿದು ಬಂದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ರಾಜಕೀಯ ಅಂಶಗಳಿರುವ ಯಾವುದೇ ದೃಶ್ಯಗಳ ಪ್ರಸಾರಕ್ಕೆ ಚುನಾವಣಾ ಆಯೋಗದ ಪೂರ್ವ ಅನುಮತಿ ಇಲ್ಲವಾದಲ್ಲಿ ತಕ್ಷಣವೇ ಅದನ್ನು ಹಿಂಪಡೆಯಲಾಗುವುದು ಎಂದು ಇದೇ ವೇಳೆ ದೆಹಲಿ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.