ಭೋಪಾಲ್:ಸಂಸತ್ ಸದಸ್ಯರಾಗಿದ್ದ ಸಿಎಂ ಕಮಲ್ನಾಥ್ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಪದವಿಗೇರಿದ್ದರು. ಮಧ್ಯಪ್ರದೇಶ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರದೆಡೆಗೆ ತೆಗೆದುಕೊಂಡು ಹೋಗಿದ್ದ ಅವರು, ಈಗ ಉಪಚುನಾವಣೆ ಎದುರಿಸಿ ಗೆಲುವು ಸಾಧಿಸಬೇಕಿದೆ.
ಲೋಕಸಮರದ ಜತೆ ಉಪಚುನಾವಣೆ ಕಾವು: ಮಧ್ಯಪ್ರದೇಶ ಸಿಎಂರಿಂದ ನಾಮಪತ್ರ ಸಲ್ಲಿಕೆ - ಕಮಲನಾಥ್
ಇಂದು ಮಧ್ಯಪ್ರದೇಶ ಸಿಎಂ ಕಮಲನಾಥ್ ಚಿಂದ್ವಾರಾ ವಿಧಾನಸಭಾ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆ
ಈ ಹಿನ್ನೆಲೆಯಲ್ಲಿ ಇಂದು ಸಿಎಂ ಕಮಲನಾಥ್ ಚಿಂದ್ವಾರಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ, ಅವರ ಪುತ್ರ ನಕುಲ್ನಾಥ್ ಸಹ ಚಿಂದ್ವಾರಾ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.