ಕರ್ನಾಟಕ

karnataka

ETV Bharat / crime

ಟೂಲ್​ಕಿಟ್ ಕೇಸ್​: ಶುಭಂಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಕೋರ್ಟ್​ - ದಿಶಾ ರವಿ

ಟೂಲ್‌ಕಿಟ್ ಪ್ರಕರಣದಲ್ಲಿ​​ ಆರೋಪಿ ಶುಭಂ ಕರ್ ಚೌಧರಿಯ ಬಂಧನದ ಅವಧಿಯನ್ನು ಮಾರ್ಚ್​ 15ರವರೆಗೆ ಕೋರ್ಟ್​ ವಿಸ್ತರಿಸಿದೆ.

Toolkit case
ಟೂಲ್​ಕಿಟ್ ಕೇಸ್

By

Published : Mar 12, 2021, 4:00 PM IST

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದ ಗ್ರೆಟಾ ಥನ್‌ಬರ್ಗ್ 'ಟೂಲ್‌ಕಿಟ್' ಪ್ರಕರಣದಲ್ಲಿ​​ ಪರಿಸರ ಕಾರ್ಯಕರ್ತ ಶುಭಂ ಕರ್ ಚೌಧರಿಗೆ ದೆಹಲಿ ನ್ಯಾಯಾಲಯವು ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

ಪ್ರಕರಣ ಸಂಬಂಧ ನೊಟೀಸ್​ ಬಂದ ಹಿನ್ನೆಲೆ ಶುಭಂ ಕರ್ ಚೌಧರಿ ಬಂಧನ ಪೂರ್ವ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ, ಮಾರ್ಚ್​ 15ರವರೆಗೆ ಬಂಧನದ ಅವಧಿಯನ್ನು ವಿಸ್ತರಿಸಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕದವರೆಗೆ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದೂ ಸೂಚಿಸಲಾಗಿದೆ.

ಪ್ರಕರಣ ಹಿನ್ನೆಲೆ

ಭಾರತ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸುವ ಕುರಿತ ಮಾಹಿತಿಯುಳ್ಳ ಟೂಲ್​ಕಿಟ್ ಅನ್ನು ಸ್ವೀಡನ್​ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್​ಬರ್ಗ್ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಟೂಲ್​ಕಿಟ್ ಸಿದ್ಧಪಡಿಸಲು ಭಾರತದ ಪರಿಸರ ಕಾರ್ಯಕರ್ತೆ ದಿಶಾ ರವಿ ಜೊತೆ ಶಾಂತನು ಮುಲುಕ್ ಮತ್ತು ವಕೀಲೆ ನಿಕಿತಾ ಜಾಕೋಬ್ ಎಂಬವರು ಸಹಾಯ ಮಾಡಿದ್ದರು. ಅಲ್ಲದೇ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಟೂಲ್​ಕಿಟ್​ ಆಧರಿಸಿ ಗಣರಾಜ್ಯೋತ್ಸವ ದಿನದಂದು ಖಲಿಸ್ತಾನ್​ ಪ್ರತ್ಯೇಕತಾವಾದಿ ಗುಂಪುಗಳು ರೈತರೊಂದಿಗೆ ಸೇರಿಕೊಂಡು ಹಿಂಸಾಚಾರ ಎಸಗಿವೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು.

ಇದನ್ನೂ ಓದಿ: ಮಮತಾ ಮೇಲೆ ಹಲ್ಲೆ ಆರೋಪ: ಉನ್ನತ ಮಟ್ಟದ ತನಿಖೆಗೆ ಟಿಎಂಸಿ ಆಗ್ರಹ

ಹೀಗಾಗಿ ದಿಶಾ ರವಿ, ನಿಕಿತಾ ಹಾಗೂ ಶಾಂತನು ವಿರುದ್ಧ ಟೂಲ್​ಕಿಟ್ ಹಂಚಿಕೆ ಹಾಗೂ ದೇಶದ್ರೋಹದ ಆರೋಪ ಮಾಡಲಾಗಿತ್ತು. ಪ್ರಕರಣ ಸಂಬಂಧ ದಿಶಾ ರವಿ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಹೊರ ಬಂದಿದ್ದರು. ಈ ಮೂವರ ಜೊತೆ ಶುಭಂ ಕರ್ ಚೌಧರಿ ಹೆಸರೂ ಕೇಳಿಬಂದಿದೆ. ನಿಕಿತಾ ಹಾಗೂ ಶಾಂತನುವಿಗೆ ಕೂಡ ಮಾರ್ಚ್​ 15ರವರೆಗೆ ಬಂಧನದಿಂದ ವಿನಾಯಿತಿ ನೀಡಿ ಕೋರ್ಟ್​ ಆದೇಶ ನೀಡಿತ್ತು. ಇದೀಗ ಶುಭಂಗೆ ಕೂಡ ಮಧ್ಯಂತರ ರಕ್ಷಣೆ ನೀಡಿದೆ.

ABOUT THE AUTHOR

...view details