ಕಡಪ (ಆಂಧ್ರಪ್ರದೇಶ):ಸಂತೋಷವಾಗಿ ಕಾಲ ಕಳೆಯಲೆಂದು ಪಿಕ್ನಿಕ್ಗೆ ತೆರಳಿದ್ದ ಎರಡು ಕುಟುಂಬಗಳು ಇದೀಗ ತಮ್ಮ ಮಕ್ಕಳನ್ನು ಕಳೆದುಕೊಂಡಿವೆ. ಆಂಧ್ರಪ್ರದೇಶದ ಪೆನ್ನಾ ನದಿಯಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದು, ಓರ್ವ ನಾಪತ್ತೆಯಾಗಿದ್ದಾನೆ.
ಮೃತರನ್ನು ಜಾವೇರಿಯಾ (12), ಅನುಸ್ ಖಾನ್ (15) ಹಾಗೂ ಅಬ್ದುಲ್ ರಶೀದ್ (18) ಎಂದು ಗುರುತಿಸಲಾಗಿದೆ. ಅಬ್ದುಲ್ ವಾಲಿದ್ ಖಾನ್ (19) ಕಾಣೆಯಾದ ಯುವಕ. ಕಡಪ ಮೂಲದ ಎರಡು ಕುಟುಂಬಗಳು ಪಿಕ್ನಿಕ್ಗೆಂದು ಬಂದು ಪೆನ್ನಾ ನದಿ ತೀರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಜಾವೇರಿಯಾ ನದಿ ನೀರಿಗೆ ಕಾಲಿಟ್ಟಿದ್ದು, ಅವಳ ಹಿಂದೆಯೇ ಮೂವರು ಹೋಗಿದ್ದಾರೆ. ಆದರೆ ಇದು ಪೋಷಕರ ಗಮನಕ್ಕೆ ಬಂದಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ನಾಲ್ವರೂ ನಾಪತ್ತೆಯಾಗಿದ್ದಾರೆ.