ಗಾಜಿಯಾಬಾದ್: ಎರಡು ದಿನಗಳ ಹಿಂದೆ ಉತ್ತರ ಪ್ರದೇಶ-ದೆಹಲಿ ಗಡಿ ಭಾಗವಾದ ಗಾಜಿಯಾಬಾದ್ನಲ್ಲಿ ನಡೆದ ರೈತನ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇಲ್ಲಿ ರೈತನ ಮಗನೇ ವಿಲನ್ ಆಗಿದ್ದು, ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಲೆ ಮಾಡಿದ್ದಾನೆ.
7 ಸುತ್ತು ಗುಂಡು ಹಾರಿಸಿ ಅಪ್ಪನನ್ನೇ ಕೊಂದ ಮಗ
ಸ್ನೇಹಿತರೊಂದಿಗೆ ಸೇರಿಕೊಂಡು ಏಳು ಬಾರಿ ಶೂಟ್ ಮಾಡಿ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ.
ಸ್ನೇಹಿತರೊಂದಿಗೆ ಸೇರಿ ಅಪ್ಪನನ್ನೇ ಕೊಂದ ಮಗ
ಜಮೀನು ಮಾರಿದ ಹಣವನ್ನು ತನಗೆ ನೀಡದೆ ಬೇರೆಡೆ ಖರ್ಚು ಮಾಡಿದ್ದಾರೆಂದು ಅಪ್ಪನ ಮೇಲೆ ಕೋಪಗೊಂಡಿದ್ದ ಮಗ ಸ್ನೇಹಿತರೊಂದಿಗೆ ಸೇರಿಕೊಂಡು ಏಳು ಬಾರಿ ಶೂಟ್ ಮಾಡಿ ತಂದೆಯನ್ನ ಕೊಂದಿದ್ದಾನೆ. ಯೋಜಿತ ರೀತಿಯಲ್ಲಿ ಕೃತ್ಯ ಎಸಗಲಾಗಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಜಿಯಾಬಾದ್ನ ಖಂಜಾರ್ಪುರ ಪ್ರದೇಶದಲ್ಲಿ ಎರಡು ದಿನದ ಹಿಂದೆ ರೈತ ಉಮೇಶ್ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೃತ ರೈತನ ಮಗ ವಿಕಾಸ್ ಹಾಗೂ ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.