ಲಕ್ನೋ: ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಫಿಯಾನ್ನನ್ನು ಪೊಲೀಸರು ಎನ್ ಕೌಂಟರ್ ಮೂಲಕ ಶುಕ್ರವಾರ ಬಂಧಿಸಿದ್ದಾರೆ. ಹಿಂದೂ ಯುವತಿಯು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಮತ್ತು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಆಕೆಯನ್ನು ಈ ದುರುಳ ಕಟ್ಟಡದ 4ನೇ ಮಹಡಿಯಿಂದ ತಳ್ಳಿದ್ದ.
ಎನ್‌ಕೌಂಟರ್ ಮೂಲಕ ಲವ್ ಜಿಹಾದ್ ಆರೋಪಿಯ ಬಂಧನ - ಲಕ್ನೋದ ದುಬಗ್ಗಾ ಪ್ರದೇಶ
ಲಕ್ನೋ ಪೊಲೀಸರು ಸುಫಿಯಾನ್ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಎನ್‌ಕೌಂಟರ್ ಬಳಿಕ ಲವ್ ಜಿಹಾದ್ ಆರೋಪಿಯ ಬಂಧನ
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಲಕ್ನೋದಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದರು. ಇದರ ನಡುವೆ ಪೊಲೀಸರು ಸುಫಿಯಾನ್ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂಪಾಯಿ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು.
ಆರೋಪಿಯ ಸುಳಿವು ಸಿಕ್ಕ ನಂತರ ಎಸಿಪಿ ಡಿ.ಕೆ.ಸಿಂಗ್ ತಂಡದ ನೇತೃತ್ವದಲ್ಲಿ ಬಂಧನ ಕಾರ್ಯಾಚರಣೆ ನಡೆದಿದೆ. ಈ ಸಂದರ್ಭದಲ್ಲಿ ಆರೋಪಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.