ಕರ್ನಾಟಕ

karnataka

ETV Bharat / crime

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯರ ಉಡುಪು ಬಿಚ್ಚಿಸಿ, ಡ್ಯಾನ್ಸ್ ಮಾಡಿಸಿದ ಪೊಲೀಸರು: ತನಿಖೆಗೆ ಆದೇಶ - ವಿದ್ಯಾರ್ಥಿನಿಯರ ಡ್ಯಾನ್ಸ್ ಮಾಡಿಸಿದ ಪೊಲೀಸರು

ವಿದ್ಯಾರ್ಥಿನಿಯರ ತನಿಖೆ ನಡೆಸುವ ನೆಪದಲ್ಲಿ ಅವರ ಬಟ್ಟೆ ಬಿಚ್ಚಿಸಿ, ನೃತ್ಯ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ವಿಶೇಷ ಸಮಿತಿ ರಚನೆ ಮಾಡಿ ತನಿಖೆಗೆ ಆದೇಶ ನೀಡಲಾಗಿದೆ.

Maharashtra latest news
Maharashtra latest news

By

Published : Mar 3, 2021, 4:03 PM IST

Updated : Mar 3, 2021, 7:09 PM IST

ಮುಂಬೈ(ಮಹಾರಾಷ್ಟ್ರ): ಜಲ್ಗಾಂವ್​ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಪೊಲೀಸರು ಬಲವಂತವಾಗಿ ನೃತ್ಯ ಮಾಡಿಸಲು ಒತ್ತಾಯಿಸಿದ್ದಾರೆಂಬ ಪ್ರಕರಣ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರ ಪೊಲೀಸರ ಮೇಲೆ ಗಂಭೀರ ಪೊಲೀಸ್​

ವಿಧಾನಸಭೆಯಲ್ಲಿ ಬಿಜೆಪಿ ಮುಖಂಡ ಸುಧೀರ್​ ಮುಂಗಂತಿವಾರ್​ ಈ ಪ್ರಕರಣ ಬಹಿರಂಗಗೊಳಿಸಿದ್ದಾರೆ. ಇದರ ಬೆನ್ನಲ್ಲೇ ತನಿಖೆ ನಡೆಸಲು ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಅನಿಲ್ ದೇಶ್​ಮುಖ್ ತಿಳಿಸಿದರು.

ವಿದ್ಯಾರ್ಥಿನಿಯರು ವಾಸವಾಗಿದ್ದ ಹಾಸ್ಟೆಲ್​​

ಜಲ್ಗಾಂವ್​ ಹಾಸ್ಟೆಲ್​ನಲ್ಲಿ ತನಿಖೆಯ ನೆಪದಲ್ಲಿ ಹೊರಗಿನವರು ಒಳಗೆ ಬರದಂತೆ ಪ್ರವೇಶ ನಿರಾಕರಣೆ ಮಾಡಲಾಗಿದೆ. ಬಳಿಕ ಕೆಲ ಹುಡುಗಿಯರನ್ನು ಬಲವಂತವಾಗಿ ಬಟ್ಟೆ ಬಿಚ್ಚಿಸಿ, ಡ್ಯಾನ್ಸ್ ಮಾಡಿಸಲು ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜತೆಗೆ ಇದರ ವಿಡಿಯೋ ಕ್ಲಿಪ್ ಕೂಡ ಹೊರಬಿದ್ದಿದೆ.

ಇದನ್ನೂ ಓದಿ: ರೈಲ್ವೆ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ... ಸಿಸಿಟಿವಿಯಲ್ಲಿ ಭೀಕರ ದೃಶ್ಯ!

ಈ ಘಟನೆ ಗೊತ್ತಾಗುತ್ತಿದ್ದಂತೆ ಮಾತನಾಡಿರುವ ದೇಶ್​ಮುಖ್, ಇದು ಅತ್ಯಂತ ದುರದೃಷ್ಟಕರ. ಈಗಾಗಲೇ ತನಿಖೆ ನಡೆಸಲು ನಾಲ್ವರು ಸದಸ್ಯರ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ವರದಿ ಸಲ್ಲಿಕೆ ಮಾಡುವಂತೆ ತಿಳಿಸಲಾಗಿದೆ. ಇದಾದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Last Updated : Mar 3, 2021, 7:09 PM IST

ABOUT THE AUTHOR

...view details