ಚೆನ್ನೈ (ತಮಿಳುನಾಡು): ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಂದ 18.25 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ನೋಟುಗಳನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈ ವಿಮಾನ ಹತ್ತಲು ಹೊರಟಿದ್ದ ಕಾಂಚೀಪುರಂನ ನಿವಾಸಿ ವಸಂತಾ ಎಂಬುವವರ ಮೇಲೆ ಅನುಮಾನಗೊಂಡ ಅಧಿಕಾರಿಗಳು ಅವರನ್ನು ಪ್ರಶ್ನಿಸಿದ್ದಾರೆ. ಮಹಿಳೆ ಭಯಭೀತರಾಗಿದ್ದು, ಅವರ ಬ್ಯಾಗ್ಗಳ ತಪಾಸಣೆ ನಡೆಸಿದಾಗ, ಸೂಟ್ಕೇಸ್ವೊಂದರ ಸಂದಿ - ಮೂಲೆಯಲ್ಲಿ ನೋಟುಗಳು ಸಿಕ್ಕಿವೆ.