ಕರ್ನಾಟಕ

karnataka

ETV Bharat / crime

ಧರ್ಮಸ್ಥಳ: ಕಿಂಡಿ ಅಣೆಕಟ್ಟೆ ಬಳಿ ಇಬ್ಬರು ಅಪರಿಚಿತ ಮಹಿಳೆಯರ ಶವ ಪತ್ತೆ.. - ಧರ್ಮಸ್ಥಳ ಕಿಂಡಿ ಅಣೆಕಟ್ಟೆ

ಸ್ನಾನ ಘಟ್ಟದ ಸಿಬ್ಬಂದಿ ಕುಲೆಂಜಿಲೋಡಿ ನಿವಾಸಿ ಜಯಂತ ಅವರು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಯಾತ್ರಾರ್ಥಿಗಳು ಬಂದು, ಮೃತದೇಹ ಇರುವುದಾಗಿ ತಿಳಿಸಿದ್ದಾರೆ.

women-dead-body-found
ಕಿಂಡಿ ಅಣೆಕಟ್ಟಿನ ಬಳಿ ಇಬ್ಬರು ಅಪರಿಚಿತ ಮಹಿಳೆಯರ ಶವ ಪತ್ತೆ.

By

Published : Feb 5, 2021, 4:59 PM IST

ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಬಳಿ ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹ ಗುರುವಾರ ಪತ್ತೆಯಾಗಿವೆ.

ಓದಿ: ಬಾಡಿಗೆ ಕೇಳಿದ್ದಕ್ಕೆ ಮಾಲೀಕರ ಕತ್ತು ಕೊಯ್ದ.. ವಿಚಾರಣೆ ವೇಳೆ ಹೊರಬಂತು ನಿಗೂಢ ರಹಸ್ಯ

ಅಂದಾಜು 40 ರಿಂದ 45 ವರ್ಷ ಮತ್ತು 20 ರಿಂದ 25 ವರ್ಷ ಪ್ರಾಯದ ಅಪರಿಚಿತ ಮಹಿಳೆಯರ ಮೃತದೇಹ ಇದಾಗಿದೆ. ಸ್ನಾನ ಘಟ್ಟದ ಸಿಬ್ಬಂದಿ ಕುಲೆಂಜಿಲೋಡಿ ನಿವಾಸಿ ಜಯಂತ ಅವರು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಯಾತ್ರಾರ್ಥಿಗಳು ಬಂದು, ಮೃತದೇಹ ಇರುವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿ ನೋಡಿದಾಗ ಎರಡೂ ಮೃತದೇಹಗಳು ಕವುಚಿ ಮಲಗಿದ ಸ್ಥಿತಿಯಲ್ಲಿ ನೀರಿನಲ್ಲಿ ಕಂಡುಬಂದಿತ್ತು.‌

ಈ ಬಗ್ಗೆ ಅವರು ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಇಬ್ಬರು ಅಪರಿಚಿತ ಮಹಿಳೆಯರು ಯಾವುದೋ ಕಾರಣಕ್ಕೆ ನೀರಿಗೆ ಹಾರಿ ಅಥವಾ ಕಾಲು ಜಾರಿ ಬಿದ್ದು, ಮೃತಪಟ್ಟಿರಬಹುದು ಎಂಬ ಸಂದೇಹವಿದೆ.

ಅವರ ವಿಳಾಸ ಪತ್ತೆ ಮತ್ತು ಮುಂದಿನ ತನಿಖೆಗಾಗಿ ಧರ್ಮಸ್ಥಳ ಪೊಲೀಸರು ಪ್ರಕ್ರಿಯೆ ಆರಂಭಿಸಿದ್ದಾರೆ.

ABOUT THE AUTHOR

...view details