ಕರ್ನಾಟಕ

karnataka

ETV Bharat / crime

ರಾಕೇಶ್ ಟಿಕಾಯತ್​ಗೆ ಜೀವ ಬೆದರಿಕೆ ಹಾಕಿದ ಇಂಜಿನಿಯರ್​ ಅರೆಸ್ಟ್​ - ರಾಕೇಶ್ ಟಿಕಾಯತ್

ರೈತ ಮುಖಂಡ ರಾಕೇಶ್ ಟಿಕಾಯತ್​ಗೆ ಜೀವ ಬೆದರಿಕೆ ಸಂದೇಶಗಳನ್ನು ಕಳುಹಿಸಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

Delhi engineer arrested for sending death threatening message to Rakesh Tikait
ರಾಕೇಶ್ ಟಿಕಾಯತ್​ಗೆ ಜೀವ ಬೆದರಿಕೆ ಹಾಕಿದ ಇಂಜಿನಿಯರ್​ ಅರೆಸ್ಟ್​

By

Published : May 29, 2021, 10:36 AM IST

ನವದೆಹಲಿ: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್​​ಗೆ ಜೀವ ಬೆದರಿಕೆ ಹಾಕಿದ್ದ ದೆಹಲಿಯ ಇಂಜಿನಿಯರ್​ನನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ನೋಯ್ಡಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ದೆಹಲಿ ನಿವಾಸಿ ಜಿತೇಂದ್ರ ಬಂಧಿತ ಆರೋಪಿಯಾಗಿದ್ದಾನೆ. ಈತ ರೈತ ಮುಖಂಡ ರಾಕೇಶ್ ಟಿಕಾಯತ್​​ ಮೊಬೈಲ್​ಗೆ ಏಪ್ರಿಲ್​​ನಿಂದ ಜೀವ ಬೆದರಿಕೆ ಸಂದೇಶಗಳನ್ನು ಕಳುಹಿಸಿಸುತ್ತಿದ್ದ ಎನ್ನಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಪಡೆಯದಿದ್ದರೆ ಟಿಕಾಯತ್​ರನ್ನು ಕೊಲೆ ಮಾಡುವುದಾಗಿ ಹೇಳಿದ್ದ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Citizenship: 13 ಜಿಲ್ಲೆಗಳಲ್ಲಿನ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ಪಡೆಯಲು ಅರ್ಜಿ ಆಹ್ವಾನ

ಸದ್ಯ ಪೊಲೀಸರ ಅತಿಥಿಯಾಗಿರುವ ಆರೋಪಿ ಜಿತೇಂದ್ರನಿಂದ ಮೊಬೈಲ್​ ವಶಪಡಿಸಿಕೊಂಡಿರುವ ಗಾಜಿಯಾಬಾದ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇಂದು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details