ಕರ್ನಾಟಕ

karnataka

ETV Bharat / crime

ಮಂಚದಾಟಕ್ಕೆ ಮನಸೋತು ಮಕ್ಕಳನ್ನೇ ಕೊಂದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ..

ಗೌಂಡಿ ಕೆಲಸ ಮಾಡಿಕೊಂಡಿದ್ದ ಪರಶುರಾಮ ತನ್ನ ಸಂಬಂಧಿಕರ ಮಗಳೇ ಆಗಿದ್ದ ಅಪರಾಧಿ ಪ್ರೇಮಾಳನ್ನು ಮದುವೆಯಾಗಿದ್ದ. ಇಬ್ಬರಿಗೆ ನಾಲ್ಕು ವರ್ಷದ ಹೆಣ್ಣು ಮಗು ರೋಹಿಣಿ ಮತ್ತು ಐದು ವರ್ಷ ಮಗ ರೋಹಿತ್‌ ಎಂಬ ಮುದ್ದಾದ ಮಕ್ಕಳು ಜನಿಸಿದ್ದರು..

mother-murdered-children-in-huballi
ಮಕ್ಕಳನ್ನೇ ಕೊಂದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ

By

Published : Apr 3, 2021, 4:06 PM IST

ಹುಬ್ಬಳ್ಳಿ :ಮದುವೆಯಾಗಿ ಮಕ್ಕಳಿದ್ದರೂ ಪರಪುರುಷನ ಸಂಬಂಧ ಬೆಳೆಸಿದ್ದ ಮಹಿಳೆ ತನ್ನ ಪಲ್ಲಂಗದಾಟಕ್ಕೆ ಹೆತ್ತ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ಎರಡು ಮಕ್ಕಳನ್ನು ಕೊಂದಿದ್ದಳು. ಕಂದಮ್ಮಗಳನ್ನು ಬಲಿ ತೆಗೆದುಕೊಂಡ ಪಾಪಿ ತಾಯಿಗೆ ಕೊನೆಗೂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ‌.

ಪ್ರಕರಣದ ಹಿನ್ನೆಲೆ :ಎರಡು ವರ್ಷಗಳ ಹಿಂದೆ ತನ್ನಿಬ್ಬರು ಮುದ್ದಾದ ಕಂದಮ್ಮಗಳನ್ನು ಕೊಂದಿದ್ದಳು. ಆ ರಾತ್ರಿ ಎರಡೂ ಮಕ್ಕಳಿಗೂ ಶಾಲೆಯ ಐಡೆಂಟಿ ಕಾರ್ಡ್ ಟ್ಯಾಗ್‌ನಿಂದ ನೇಣು ಬಿಗಿದಿದ್ದ ಈ ಪಾಪಿ ತಾಯಿ ತಾನೇನು ಮಾಡೇ ಇಲ್ಲ ಎಂದು ನಾಟಕವಾಡಿದ್ದಳು.

ಮಕ್ಕಳನ್ನೇ ಕೊಂದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ

ಓದಿ: ಗುಂಡಿನ ಮತ್ತಲ್ಲಿ ದುಷ್ಕೃತ್ಯ: ಕೊಡಗಿನಲ್ಲಿ ಮೂವರ ಸಜೀವ ದಹನ, ಮೂವರು ಆಸ್ಪತ್ರೆಯಲ್ಲಿ ಸಾವು

ಆದರೆ, ಅನುಮಾನ ಬಂದ ಆಕೆಯ ಪತಿ ಪರಶುರಾಮ ಪೊಲೀಸರಿಗೆ ಪತ್ನಿ ಪ್ರೇಮಾ ಅಲಿಯಾಸ್ ಚೈತ್ರಾ ಹುಲಕೋಟಿ ಮೇಲೆ ದೂರು ದಾಖಲಿಸಿದ್ದ. ಕೊನೆಗೂ ಪೊಲೀಸರ ತನಿಖೆಯ ವೇಳೆ ಹಾಗೂ ಸ್ಥಳೀಯರ ಸಾಕ್ಷಿಯಿಂದ ಆಕೆಯೇ ಮಕ್ಕಳನ್ನು ಕೊಂದಿದ್ದಳು ಎನ್ನುವುದು ಬಯಲಾಗಿತ್ತು. ಆದರೆ, ಅಷ್ಟೇ ಅಲ್ಲ, ಪೊಲೀಸ್ ತನಿಖೆ ವೇಳೆ ಮತ್ತೊಂದು ಭಯಾನಕ ಮಾಹಿತಿಯನ್ನು ಆಕೆ ಹೊರ ಹಾಕಿದ್ದಳು.

ಅಷ್ಟಕ್ಕೂ ಆಕೆ ಮಕ್ಕಳನ್ನು ಕೊಂದಿದ್ದು ತನ್ನ ಅನೈತಿಕ ಸಂಬಂಧಕ್ಕಾಗಿಯಂತೆ. ಅಲ್ಲದೆ ತನ್ನ ಪಲ್ಲಂಗದಾಟಕ್ಕೆ ಮಕ್ಕಳು ಅಡ್ಡಿ ಬರುತ್ತಿದ್ದವು ಎಂದು ಅವುಗಳನ್ನು ಸಾಯಿಸಿ ನಾಟಕವಾಡಿದ್ದಳು. ಕೊನೆಗೂ ಹಳೇ ಹುಬ್ಬಳ್ಳಿ ಪೊಲೀಸರ ತನಿಖೆಯಿಂದ ಆಕೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾಳೆ.

ಪತಿ ಕೆಲಸಕ್ಕೆ,ಪತ್ನಿ ಪಲ್ಲಂಗಕ್ಕೆ :ಗೌಂಡಿ ಕೆಲಸ ಮಾಡಿಕೊಂಡಿದ್ದ ಪರಶುರಾಮ ತನ್ನ ಸಂಬಂಧಿಕರ ಮಗಳೇ ಆಗಿದ್ದ ಅಪರಾಧಿ ಪ್ರೇಮಾಳನ್ನು ಮದುವೆಯಾಗಿದ್ದ. ಇಬ್ಬರಿಗೆ ನಾಲ್ಕು ವರ್ಷದ ಹೆಣ್ಣು ಮಗು ರೋಹಿಣಿ ಮತ್ತು ಐದು ವರ್ಷ ಮಗ ರೋಹಿತ್‌ ಎಂಬ ಮುದ್ದಾದ ಮಕ್ಕಳು ಜನಿಸಿದ್ದರು.

ಆದರೆ, ಗಂಡ ಪರಶುರಾಮ ಗೌಂಡಿ ಕೆಲಸಕ್ಕೆ ಹೋದರೆ, ಇತ್ತ ಪತ್ನಿ ಅದೇ ಏರಿಯಾದವನ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಅಲ್ಲದೆ ಕದ್ದುಮುಚ್ಚಿ ಚೆಲ್ಲಾಟವಾಡುತ್ತಿದ್ದ ಪ್ರೇಮಾಗೆ ಅದೆಷ್ಟು ಬಾರಿ ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ. ಕೊನೆಗೆ ಹೆತ್ತ ಮಕ್ಕಳನ್ನ ಕೊಂದು ಜೈಲು ಪಾಲಾಗಿದ್ದ ಈಕೆಗೆ ಸದ್ಯ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಪಾಪಿ ತಾಯಿಯ ವಿರುದ್ಧ ಸೂಕ್ತ ಸಾಕ್ಷಾಧಾರ ಸಂಗ್ರಹಿಸಿ ಕೊನೆಗೂ ಅಕೆಗೆ ಶಿಕ್ಷೆ ಕೊಡಿಸುವಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ ಇತ್ತ ಪತಿಯ ಕುಟುಂಬಸ್ಥರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details