ಕರ್ನಾಟಕ

karnataka

ETV Bharat / crime

ಬಂಟ್ವಾಳ: ನನ್ನನ್ನು ಚಿಕ್ಕಪ್ಪನೇ ಅತ್ಯಾಚಾರ ಮಾಡುತ್ತಿದ್ದ, ಯುವತಿ ದೂರು

ಸಂತ್ರಸ್ತೆ ಕಾಲೇಜಿಗೆ ಹೋಗುತ್ತಿದ್ದು, ಕಳೆದೊಂದು ವರ್ಷದಿಂದ ಬಿ.ಸಿ.ರೋಡಿನಲ್ಲಿ ವಾಸವಾಗಿದ್ದಳು. ಆದರೆ, ಈಕೆಯ ಚಿಕ್ಕಪ್ಪ ಇವಳನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದನಂತೆ.

 A man rape on girl in bantwal
A man rape on girl in bantwal

By

Published : Jun 14, 2021, 5:50 PM IST

ಬಂಟ್ವಾಳ: ತಾಲೂಕಿನ ಯುವತಿಯೊಬ್ಬಳು ತನ್ನ ಚಿಕ್ಕಪ್ಪನಿಂದಲೇ ನಿರಂತರವಾಗಿ ಅತ್ಯಾಚಾರವಾಗುತ್ತಿದೆ ಎಂದು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾಳೆ. ಇದರನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪುರುಷೋತ್ತಮ್ ಎಂಬಾತನ ವಿರುದ್ಧ ದೂರು ನೀಡಲಾಗಿದ್ದು, ಆತನ ಪತ್ನಿಯ ಅಕ್ಕನ ಮಗಳು ಈ ದೂರು ನೀಡಿದ್ದಾರೆ. ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾಳೆ.

ಸಂತ್ರಸ್ತೆ ಕಾಲೇಜಿಗೆ ಹೋಗುತ್ತಿದ್ದು, ಕಳೆದೊಂದು ವರ್ಷದಿಂದ ಬಿ.ಸಿ.ರೋಡಿನಲ್ಲಿ ವಾಸವಾಗಿದ್ದಳು. ಆರೋಪಿಯೂ ಅಲ್ಲಿ ವಾಸವಾಗಿದ್ದು, ವಿದ್ಯಾರ್ಥಿನಿಗೆ ಬೆದರಿಸಿ ಅತ್ಯಾಚಾರ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details