ಕರ್ನಾಟಕ

karnataka

ETV Bharat / crime

ಆನ್‌ಲೈನ್‌ನಲ್ಲಿ ಚಾಕು ಕೊಂಡು ಮಾಜಿ ಪ್ರೇಯಸಿಯ ಕೊಲೆ ಯತ್ನ: ಸೋದರಿಯ ಬುದ್ಧಿಮತ್ತೆ ಯುವತಿಯ ಪ್ರಾಣ ಉಳಿಸಿತು! - ಮಾಝಿ ಪ್ರಿಯಕರನ ಬಂಧಿಸಿದ ಪೊಲೀಸರು

ಅಮೆಜಾನ್​​ನಲ್ಲಿ ಚಾಕು ಕೊಂಡಿದ್ದ ವ್ಯಕ್ತಿಯನ್ನು ಮಾಜಿ ಪ್ರೇಯಸಿಯ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

a lover went to his girl friend with  knife in jubilee hills hyderabad
ಅಮೆಜಾನ್​ನಲ್ಲಿ ಚಾಕು ಕೊಂಡು, ಮಾಜಿ ಪ್ರೇಯಸಿ ಬಳಿಗೆ ತೆರಳಿದಾಗ..

By

Published : Jul 8, 2021, 7:32 PM IST

ಹೈದರಾಬಾದ್(ತೆಲಂಗಾಣ):ಮಾಜಿ ಪ್ರೇಯಸಿಯ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ ಚಾಕು ವಶಕ್ಕೆ ಪಡೆದಿದ್ದಾರೆ. ಶ್ರೀಕಾಂತ್ ಬಂಧಿತ ಆರೋಪಿಯಾಗಿದ್ದು, ಹೈದರಾಬಾದ್​​ನ ಬೋರಬಂಡ ಸಮೀಪದ ಬಂಜಾರಾನಗರದಲ್ಲಿ ಘಟನೆ ನಡೆದಿದೆ.

ಹೈದರಾಬಾದ್​​ನ ಎನ್​ಎಸ್​ಬಿ ನಗರದಲ್ಲಿ ಆರೋಪಿ ಶ್ರೀಕಾಂತ್ ವಾಸ ಮಾಡುತ್ತಿದ್ದಾನೆ. ಸ್ಟಾರ್​ ಹೋಟೆಲ್​ನಲ್ಲಿದ್ದ ಜಿಮ್​ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ 23 ವರ್ಷದ ಯುವತಿಯನ್ನು ಈತ ಪ್ರೀತಿಸುತ್ತಿದ್ದ. ನಾಲ್ಕು ವರ್ಷಗಳ ಹಿಂದಿನ ಪರಸ್ಪರ ಪ್ರೀತಿಯಲ್ಲಿ ವೈಮನಸ್ಯ ಉಂಟಾಗಿ ಇಬ್ಬರೂ ಬೇರೆ ಬೇರೆಯಾಗಿದ್ದರು. 2020ರ ಅಕ್ಟೋಬರ್​ನಲ್ಲಿ ಜಗಳ ನಡೆದು ಮಾದಾಪುರ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಳು.

ಮಂಗಳವಾರ ಮಧ್ಯರಾತ್ರಿ ಶ್ರೀಕಾಂತ್​​ ಯುವತಿಗೆ ಕರೆ ಮಾಡಿ, ನಿನ್ನೊಂದಿಗೆ ಮಾತನಾಡಬೇಕೆಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಯುವತಿ ತನ್ನ ಮನೆಗೆ ಯುವಕನನ್ನು ಆಹ್ವಾನಿಸುತ್ತಾಳೆ. ಶ್ರೀಕಾಂತ್​ನ ನಡವಳಿಕೆ ಕಂಡು ಯುವತಿಯ ಸೋದರಿಗೆ ಅನುಮಾನ ಮೂಡುತ್ತದೆ.

ಬೆನ್ನ ಹಿಂದೆ ಚೂರಿ ಇಟ್ಟುಕೊಂಡಿದ್ದ..

ಶ್ರೀಕಾಂತ ಮನೆಗೆ ಬಂದಾಗ ಯುವತಿಯ ಸೋದರಿಗೆ ಅನುಮಾನ ಉಂಟಾಗಿತ್ತು. ಅವನ ಬೆನ್ನಲ್ಲಿ ಚಾಕು ಇಟ್ಟುಕೊಂಡಿರುವುದು ಆಕೆಗೆ ಗೊತ್ತಾಗುತ್ತದೆ. ತಕ್ಷಣ ತನ್ನ ಸಹೋದರಿಯನ್ನು ಪಕ್ಕಕ್ಕೆ ಕರೆದು, ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಳ್ಳುವಂತೆ ಸೂಚಿಸುತ್ತಾಳೆ. ಅದರಂತೆ ಯುವತಿ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡು, ರಾತ್ರಿ ಸುಮಾರು 12.53ಕ್ಕೆ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸುತ್ತಾಳೆ.

ಇದನ್ನೂ ಓದಿ:ಮೋದಿ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಸಿಎಂ ಬಿಎಸ್​ವೈ ಚಿಂತನೆ

ಪೊಲೀಸರು ಬರುವವರೆಗೆ ಯುವಕನನ್ನು ಯುವತಿಯ ಸೋದರಿ ಮಾತನಾಡಿಸುತ್ತಲೇ ಇರುತ್ತಾಳೆ. ಸಮಾಚಾರ ತಲುಪುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ, ಜ್ಯೂಬಿಲಿ ಹಿಲ್ಸ್​ ಪೊಲೀಸರು, ಯುವತಿಯ ಮನೆಗೆ ನುಗ್ಗಿ, ಶ್ರೀಕಾಂತ್​ನನ್ನು ಹಿಡಿದು, ಆತನ ಬಳಿಯಿದ್ದ ಚಾಕುವನ್ನು ಜಪ್ತಿ ಮಾಡುತ್ತಾರೆ.

ಪೊಲೀಸರು ಜಪ್ತಿ ಮಾಡಿದ ಚಾಕು

ಅಮೆಜಾನ್​ನಲ್ಲಿ ಚಾಕು ಖರೀದಿಸಿದ್ದ..

ಶ್ರೀಕಾಂತ್​ನನ್ನು ಈ ವೇಳೆ ವಿಚಾರಣೆಗೆ ಒಳಪಡಿಸಿದಾಗ, ತನ್ನ ಸಹೋದರ ಹುಟ್ಟುಹಬ್ಬದ ಸಲುವಾಗಿ ಚಾಕು ಖರೀದಿಸಿದ್ದೇನೆ ಎಂದಿದ್ದಾನೆ. ತನಿಖೆ ಮತ್ತಷ್ಟು ತೀವ್ರಗೊಂಡಾದ, ಚಾಕುವನ್ನು ಒಂದೂವರೆ ಸಾವಿರ ರೂಪಾಯಿಗಳಿಗೆ ಅಮೆಜಾನ್​ನಲ್ಲಿ ಖರೀದಿ ಮಾಡಿರುವುದು ತಿಳಿದುಬಂದಿದೆ. ಮೇಲ್ನೋಟಕ್ಕೆ ಶ್ರೀಕಾಂತ್ ಕೊಲೆ ಮಾಡಲು, ಚಾಕು ಖರೀದಿಸಿರುವುದಾಗಿ ತಿಳಿದುಬಂದಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details