ಪಲಕೊಂಡ (ಆಂಧ್ರ ಪ್ರದೇಶ):ಹೊಸ ವರ್ಷದ ದಿನದಿಂದೇ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಪಾರ್ವತಿಪುರಂ ಮನ್ಯಾಂ ವಿರಾಘಟ್ಟಮಂ ಮಂಡಲ್ನಲ್ಲಿ ನಡೆದಿದೆ. ವೀರಘಟ್ಟಂ ಮಂಡಲ್ ಗ್ರಾಮದ ಬಾಲಕಿ ಜ. 1ರಂದು ಸಂಜೆ ಮನೆಯಿಂದ ಹೊರ ಬಂದ ಸಂದರ್ಭದಲ್ಲಿ 48 ವರ್ಷದ ಗ್ರಾಮದ ವ್ಯಕ್ತಿ ಆಕೆ ಬಾಯಿ ಮುಚ್ಚಿ ಸ್ಮಶಾನಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆಯ ಕಿರುಚಾಟ ಕೇಳಿದ ಹಾದಿ ಹೋಕರೊಬ್ಬರು ರಕ್ಷಣೆಗೆ ಧಾವಿಸಿದ್ದಾರೆ ಎಂದು ಡಿವೈಎಸ್ಪಿ ಕೃಷ್ಣಾ ರಾವ್ ತಿಳಿಸಿದ್ದಾರೆ.
ಅದೇ ಗ್ರಾಮದ ಗುರು ನಾಯ್ಡು ಈ ಕೃತ್ಯ ಎಸಗಿದ ಆರೋಪಿ. ಹಾದಿ ಹೋಕರು ಸಹಾಯಕ್ಕೆ ಬರುತ್ತಿದ್ದಂತೆ ಆರೋಪಿ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಸ್ಥಳೀಯರು ಆತನನ್ನು ಬೆನ್ನಟ್ಟಿದ್ದಾರೆ. ಬಳಿಕ ನೆರೆಯ ಹಳ್ಳಿಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಗ್ರಾಮಸ್ಥರು ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ರಕ್ತಸ್ತ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಪಲಕೊಂಡ ಪ್ರಾದೇಶಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.