ಕರ್ನಾಟಕ

karnataka

ETV Bharat / crime

ಚೆನ್ನೈನಲ್ಲಿ 30 ಲಕ್ಷ ರೂ. ದರೋಡೆ: ಸಿನಿಮೀಯ ಮಾದರಿ ಚೇಸ್, ಬೈಕ್​ ಸ್ಕಿಡ್​ ಆಗಿ ಸಿಕ್ಕಿ ಬಿದ್ದ ಕಳ್ಳ - ಅಪರಾಧ ಸುದ್ದಿ

ಚೆನ್ನೈನ ಫೈನಾನ್ಸ್​ ಕಂಪನಿಯೊಂದರಲ್ಲಿ ದರೋಡೆ. ದರೋಡೆಕೋರರನ್ನು ಬೆನ್ನಟ್ಟಿದ ಸಿಬ್ಬಂದಿ. ಬೈಕ್ ಸ್ಕಿಡ್ ಆಗಿ ಸಿಕ್ಕಿಬಿದ್ದ ಓರ್ವ ಕಳ್ಳ.

ದರೋಡೆ
Robbery

By

Published : Aug 17, 2022, 6:26 PM IST

ಚೆನ್ನೈ: ಫೈನಾನ್ಸ್ ಕಂಪನಿಯೊಂದರ ಮಾಲೀಕ ಹಾಗೂ ಉದ್ಯೋಗಿಗಳಿಗೆ ಚಾಕು ತೋರಿಸಿ ಬೆದರಿಸಿ 7 ಮಂದಿಯ ದರೋಡೆಕೋರರ ತಂಡವೊಂದು 30 ಲಕ್ಷ ರೂಪಾಯಿ ದೋಚಿರುವ ಘಟನೆ ಚೆನ್ನೈನ ವಡಪಳನಿಯಲ್ಲಿ ಮಂಗಳವಾರ ನಡೆದಿದೆ. ದರೋಡೆಗೊಳಗಾದ ಕಂಪನಿಯನ್ನು ಓಝೋನ್ ಕ್ಯಾಪಿಟಲ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಕಂಪನಿಯ ಮಾಲೀಕ ಸರವಣನ್ ಅವರು ಗಲಾಟೆ ಶಬ್ದ ಕೇಳಿ ಸಂಶಯಗೊಂಡು ಕಚೇರಿಗೆ ಬೀಗ ಹಾಕಿದರು. ಈ ಸಂದರ್ಭದಲ್ಲಿ ಒಳಗಿದ್ದ ಕಳ್ಳರು ತಪ್ಪಿಸಿಕೊಳ್ಳಲು ಬಾಗಿಲು ಒಡೆಯಲು ಪ್ರಯತ್ನಿಸಿದಾಗ ಉದ್ಯೋಗಿ ನವೀನ್ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಆದರೆ ಕಳ್ಳರು ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇಷ್ಟಾದರೂ ಕಂಪನಿಯ ಮಾಲೀಕ ಹಾಗೂ ಉದ್ಯೋಗಿ ಚಾಕಚಕ್ಯತೆಯಿಂದ ವರ್ತಿಸಿ ಸಿನಿಮೀಯ ರೀತಿಯಲ್ಲಿ ಗ್ಯಾಂಗ್ ಬೆನ್ನಟ್ಟಿದ್ದಾರೆ.

ಕಳ್ಳರನ್ನು ಚೇಸ್ ಮಾಡುತ್ತಿದ್ದ ವೇಳೆ ತಿರುನಗರ 1ನೇ ರಸ್ತೆಯಲ್ಲಿ ಕಳ್ಳರ ಬೈಕ್‌ಗಳು ಅಪಘಾತಕ್ಕೀಡಾಗಿ ಅವರಲ್ಲೊಬ್ಬ ಕೆಳಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ದಾರಿಹೋಕರು ಆತನನ್ನು ಹಿಡಿದು ವಡಪಳನಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಗಲಾಟೆಯ ಲಾಭ ಪಡೆದ ಇತರ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸರವಣನ್ ನೀಡಿದ ದೂರಿನ ಆಧಾರದ ಮೇಲೆ ವಡಪಳನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿತ ದರೋಡೆಕೋರನ ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿಯನ್ನು ವಿರುಗಂಬಾಕ್ಕಂ ಮೂಲದ ಸೈಯದ್ ರಿಯಾಜ್ (22) ಎಂದು ಗುರುತಿಸಲಾಗಿದೆ. ತನಿಖೆ ವೇಳೆ ಇಸ್ಮಾಯಿಲ್, ಭರತ್, ಕಿಶೋರ್, ಜಾನಿ, ತಮಿಳ್, ಮೊಟ್ಟೈ ದರೋಡೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ತಲೆಮರೆಸಿಕೊಂಡಿರುವ ದರೋಡೆಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ.

ABOUT THE AUTHOR

...view details