ಚಿಯಾಪಾಸ್(ಮೆಕ್ಸಿಕೋ): ದಕ್ಷಿಣ ಮೆಕ್ಸಿಕೋದ ರಾಜ್ಯವಾದ ಚಿಯಾಪಾಸ್‌ನಲ್ಲಿರುವ ಹೆದ್ದಾರಿಯಲ್ಲಿ ಎರಡು ವ್ಯಾನ್‌ಗಳು ಡಿಕ್ಕಿ ಹೊಡೆದು ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯಗೊಂಡವರು ಮಧ್ಯ ಅಮೆರಿಕದ ರಾಷ್ಟ್ರವಾದ ಹೊಂಡುರಾಸ್ನ ಪ್ರಜೆಗಳು ಎಂದು ತಿಳಿದುಬಂದಿದ್ದು, ಗಾಯಗೊಂಡವರನ್ನು ಪ್ಯಾಲೆಂಕ್ಸ್ ಜನರಲ್ ಆಸ್ಪತ್ರೆಗೆ ವರ್ಗಾಯಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯ ಕಾಲಮಾನ ಮುಂಜಾನೆ 5 ಗಂಟೆಗೆ ಪಾಲೆಂಕ್ ಮತ್ತು ಪ್ಲ್ಯಾಸ್ ಡಿ ಕ್ಯಾಟಝಾಜಾ ಹೆದ್ದಾರಿಯಲ್ಲಿ ಎರಡು ಟೊಯೋಟಾ ಹಿಯಾಸ್ ವಾಹನಗಳು ಪರಸ್ಪರ ಡಿಕ್ಕಿಯಾಗಿ, ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ ಎಂದು ಸರ್ಕಾರದ ನಾಗರಿಕ ರಕ್ಷಣಾ ಸಂಸ್ಥೆಯ ಅಧಿಕಾರಿಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.