ಕರ್ನಾಟಕ

karnataka

By

Published : Dec 24, 2019, 1:18 PM IST

ETV Bharat / city

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗಿಲ್ಲ ತೊಂದರೆ: ಪಿಎಸ್​​ಐ ಅಭಯ

ತುಮಕೂರು ಜಿಲ್ಲೆಯ ಪಾವಗಡ ಪೊಲೀಸ್​ ಠಾಣೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಪೊಲೀಸರಿಗೆ ಮುಸ್ಲಿಂ ಧರ್ಮಿಯರಿಗೆ ಯಾವುದೇ ತೊಂದರೆಗಳು ಇಲ್ಲ ಎಂಬುದನ್ನು ಪೊಲೀಸರು ಅರಿವುದು ಮೂಡಿಸಿದರು.

the-citizenship-amendment-act-2019
ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ತುಮಕೂರು/ಪಾವಗಡ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಕಾಯ್ದೆ ಜಾರಿಯಿಂದ ದೇಶದ ಯಾವುದೇ ಧರ್ಮದ ಜನರಿಗೆ ತೊಂದರೆಯಾಗುವುದಿಲ್ಲ ಎಂದು ಪಾವಗಡ ಪಿಎಸ್​​ಐ ಜಿ.ಕೆ. ರಾಘವೇಂದ್ರ ತಿಳಿಸಿದರು.

ಇಲ್ಲಿ ಹಮ್ಮಿಕೊಂಡಿದ್ದ 2019ನೇ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿd ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ಕಾಯ್ದೆಯಿಂದ ಭಾರತದಲ್ಲಿ ನೆಲೆಸಿರುವ ಮುಸ್ಲಿಮರಿಗೆ ತೊಂದರೆ ಆಗುವುದಿಲ್ಲ. ಈಗಾಗಲೇ ವಾಸವಿರುವ ಮುಸ್ಲಿಮರಿಗೂ ಪೌರತ್ವ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಮೊದಲು ಅರ್ಥ ಮಾಡಿಕೊಳ್ಳಬೇಕು ಹಾಗೂ ನಾಗರಿಕರ ಹಿತ ಕಾಪಾಡುವುದು ಮತ್ತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆ ಹೊಣೆ ನಮ್ಮ ಮೇಲಿದೆ ಎಂದು ಹೇಳಿದರು.

ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ವೃತ್ತ ನಿರೀಕ್ಷಕ ಪಿ ಐ ವೆಂಕಟೇಶ್ ಮಾತನಾಡಿ, ಸಿಎಎ ಹಾಗೂ ಎನ್ಆರ್​​​ಸಿ ಎರಡೂ ಒಂದೇ ಅಲ್ಲ. ಇದರ ನಡುವಿನ ವ್ಯತ್ಯಾಸ ಮೊದಲು ತಿಳಿದುಕೊಳ್ಳಬೇಕು. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡದಿರಲು ಕಾಯ್ದೆಯಲ್ಲಿ ಹೇಳಲಾಗಿದೆ ಎಂದು ವಿವರಿಸಿದರು.

ABOUT THE AUTHOR

...view details