ತುಮಕೂರು: ಗುಡ್ಡದಿಂದ ಕೆಳಗಿಳಿದು ಬಂದು ಹಾಡಹಗಲೇ ಸಾರ್ವಜನಿಕರನ್ನು ಕರಡಿ ಬೆಚ್ಚಿಬೀಳಿಸಿದ ಘಟನೆ ಪಾವಗಡ ಪಟ್ಟಣದ ಎಸ್‌ಎಸ್‌ಕೆ ಕಾಲೇಜು ಸಮೀಪದಲ್ಲಿ ಕಂಡು ಬಂದಿದೆ.
ಹಾಡಹಗಲೇ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಕರಡಿ.. - S S K college
ಗುಡ್ಡದಿಂದ ಕೆಳಗಿಳಿದು ಬಂದು ಹಾಡಹಗಲೇ ಸಾರ್ವಜನಿಕರನ್ನು ಕರಡಿ ಬೆಚ್ಚಿಬೀಳಿಸಿದ ಘಟನೆ ಪಾವಗಡ ಪಟ್ಟಣದ ಎಸ್ ಎಸ್ ಕೆ ಕಾಲೇಜು ಸಮೀಪದಲ್ಲಿ ಕಂಡು ಬಂದಿದೆ.
ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಕರಡಿ
ಜಿಲ್ಲೆಯ ಪಾವಗಡ, ಕೊರಟಗೆರೆ, ಮಧುಗಿರಿ ಭಾಗದಲ್ಲಿ ಕರಡಿಗಳ ಹಾವಳಿ ಮಿತಿಮೀರಿದೆ. ಇಂದು ಹಾಡಹಗಲೇ ಎಸ್‌ಎಸ್‌ಕೆ ಕಾಲೇಜು ಸಮೀಪದಲ್ಲಿ ಗುಡ್ಡದಿಂದ ಕೆಳಗಿಳಿದು ಬಂದ ಕರಡಿ ಕೆಲಕಾಲ ಜನರನ್ನು, ವಿದ್ಯಾರ್ಥಿಗಳನ್ನು ಭಯಬೀತಗೊಳಿಸಿತ್ತು. ಈ ವೇಳೆ ಅಲ್ಲೇ ಇದ್ದ ಕೆಲವರು ಕರಡಿಯ ಚಲನವಲನವನ್ನು ಮೊಬೈಲ್ನಲ್ಲಿ ಸೆರೆಹಿಡಿದರು. ಸ್ವಲ್ಪ ಸಮಯದ ನಂತರ ಗುಡ್ಡದ ಕಡೆ ಹೋಯಿತು.
ಈ ವೇಳೆ ಕಾಡಿನಿಂದ ಪಟ್ಟಣದತ್ತ ಆಗಮಿಸುತ್ತಿರುವ ಕರಡಿಗಳನ್ನು ಸೆರೆ ಹಿಡಿದು, ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.