ಕರ್ನಾಟಕ

karnataka

ETV Bharat / city

ಶಾಲಾ ಮಕ್ಕಳಿಗೆ ಹಾಲು ವಿತರಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ, ಸರಿಪಡಿಸುತ್ತೇವೆ: ಸಚಿವ ಬಿ.ಸಿ. ನಾಗೇಶ್

ಶಾಲಾ ಮಕ್ಕಳಿಗೆ ಹಾಲು ವಿತರಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದು, ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

Minister b c nagesh
ಸಚಿವ ಬಿ.ಸಿ. ನಾಗೇಶ್

By

Published : Nov 20, 2021, 3:23 PM IST

ತುಮಕೂರು: ಶಾಲಾ ಮಕ್ಕಳಿಗೆ ಮಿಲ್ಕ್ ಪೌಡರ್ ಸರಬರಾಜಿನಲ್ಲಿ ಅಡೆತಡೆಯಾಗಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಸಚಿವ ಬಿ.ಸಿ. ನಾಗೇಶ್

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ಮಕ್ಕಳ ಮನೆಗಳಿಗೆ ಹಾಲಿನ ಪೌಡರ್ ಅನ್ನು ವಿತರಿಸಲಾಗಿದೆ. ಆದ್ರೆ ಈ ತಿಂಗಳು ಹಾಲಿನ ಪೌಡರ್ ಸಂಗ್ರಹವಿಲ್ಲದಂತಾಗಿದೆ ಎಂದರು.

ಬಿಸಿಯೂಟ ಯೋಜನೆಯಡಿ ಕಳಪೆ ಆಹಾರ ಪದಾರ್ಥಗಳ ಕುರಿತು ದೂರು ಬಂದಿರುವುದು ರಾಜ್ಯದ 48 ಸಾವಿರ ಶಾಲೆಗಳ ಪೈಕಿ ಕೇವಲ ಮೂರು ಶಾಲೆಗಳಲ್ಲಿ ಮಾತ್ರ. ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಚಿಕ್ಕಮಗಳೂರು : ಹಳ್ಳದಲ್ಲಿ ಕೊಚ್ಚಿ ಹೋದ ಸ್ಕೂಟರ್​ ಸವಾರ

ಆಹಾರ ಪದಾರ್ಥಗಳು ಸರಬರಾಜು ಆಗದಿದ್ದ ಸಂದರ್ಭದಲ್ಲಿ ಸ್ಥಳೀಯವಾಗಿಯೇ ಖರೀದಿ ಮಾಡುವಂತೆ ಬಿಇಒ ಗಳಿಗೆ ಸೂಚಿಸಲಾಗಿದೆ ಎಂದರು.

ABOUT THE AUTHOR

...view details