ತುಮಕೂರು: ಜಿಲ್ಲೆಯ ಐಯ್ಯಪ್ಪನ ಭಕ್ತರೋರ್ವರು ಪುನೀತ್ ರಾಜ್ಕುಮಾರ್ ಭಾವಚಿತ್ರ ಹಿಡಿದು ಶಬರಿಮಲೆಗೆ ಹೋಗಿ ಬಂದಿದ್ದಾರೆ.
ಪುನೀತ್ ಭಾವಚಿತ್ರ ಹಿಡಿದು ಅಯ್ಯಪ್ಪನ ದರ್ಶನ ಮಾಡಿದ ಮಾಲಾಧಾರಿಗಳು ತುಮಕೂರು ತಾಲೂಕಿನ ಅಮಲಪುರ ಗ್ರಾಮದ ದೇವರಾಜು ಪುನೀತ್ ರಾಜ್ಕುಮಾರ್ ಅಭಿಮಾನಿ ಆಗಿದ್ದಾರೆ. ಶಬರಿಮಲೆಯಿಂದ ವಾಪಸ್ ತುಮಕೂರಿಗೆ ಬಂದ ನಂತರ ದೇವರಾಜ್ ಅವರು ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ.
ಮನೆಯ ಪಕ್ಕದಲ್ಲಿರುವ ದೇಗುಲದಲ್ಲಿನ ಶನೇಶ್ವರ ಮತ್ತು ಮುನೇಶ್ವರ ದೇವರ ಸಮೀಪದಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರವಿಟ್ಟು ಪೂಜೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಪುನೀತ್-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ : ಅಪ್ಪು ಇಲ್ಲದೆ ಮಂಕಾಗಿದೆ ರಾಜಕುಮಾರನ ಮನೆ
ದೇವರಾಜು ಅವರ ಕುಟುಂಬಕ್ಕೆ ಬಹು ಹಿಂದಿನಿಂದಲೂ ರಾಜ್ಕುಮಾರ್ ಅವರ ಮೇಲೆ ತುಂಬಾ ಅಭಿಮಾನ. ಹೀಗಾಗಿ, ತಮ್ಮ ಮನೆಯ ಪಕ್ಕದಲ್ಲಿಯೇ ನಿರ್ಮಾಣವಾಗುತ್ತಿರುವ ನೂತನ ಶನೇಶ್ವರ ಮತ್ತು ಮುನೇಶ್ವರ ದೇಗುಲದಲ್ಲಿ ಪುನೀತ್ ವಿಗ್ರಹವನ್ನು ಇಟ್ಟು ಪೂಜಿಸುವ ಕುರಿತು ಚಿಂತನೆ ಮಾಡುತ್ತಿದ್ದಾರೆ.