ತುಮಕೂರು :ಜಿಲ್ಲೆಯಸದಾಶಿವನಗರದ ರಿಂಗ್ ರಸ್ತೆಯಲ್ಲಿ ಹಾಡುಹಗಲೇ ಪುಂಡರು ಬೈಕ್ ವ್ಹೀಲಿಂಗ್ ಮಾಡುತ್ತಾ ರಸ್ತೆ ಮೇಲೆ ಓಡಾಡುತ್ತಿದ್ದವರಲ್ಲಿ ಭೀತಿ ಮೂಡಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಸುಮಾರು 4 ಬೈಕ್ಗಳಲ್ಲಿ ಬಂದ ಪುಂಡರು ಮರಳೂರು ಸರ್ಕಲ್ನಿಂದ ಸದಾಶಿವನಗರದ ಎರಡನೇ ಹಂತದ ಸರ್ಕಲ್ವರೆಗೂ ಸತತ ಅರ್ಧ ಗಂಟೆಗೂ ಹೆಚ್ಚು ಕಾಲ ಬೈಕ್ ವ್ಹೀಲಿಂಗ್ ಮಾಡಿದ್ದಾರೆ. ಇನ್ನು ಇದೇ ಸ್ಥಳದಲ್ಲಿ ಪೊಲೀಸರು ಸಂಚರಿಸಿ ಗಸ್ತು ಹಾಕುತ್ತಿದ್ದರೂ ಯಾಮಾರಿಸಿದ್ದಾರೆ.