ತುಮಕೂರು: ದಿ. ಪುನೀತ್ ರಾಜ್‍ಕುಮಾರ್(Puneeth rajkumar) ಅವರ ಅಭಿಮಾನಿಯಾಗಿದ್ದ 90ರ ವೃದ್ಧೆ ಮೃತಪಟ್ಟಿದ್ದಾರೆ. ಮರಣದ ನಂತರ ಕುಟುಂಬಸ್ಥರು ವೃದ್ಧೆಯ ನೇತ್ರದಾನ (eye donation) ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಗೋವಿಂದಯ್ಯ ಎಂಬುವರ ಪತ್ನಿ ಎಲ್. ರತ್ನಮ್ಮ( 90) ಎಂಬುವರು ವಯೋಸಹಜವಾಗಿ ಮೃತಪಟ್ಟಿದ್ದಾರೆ. ನಂತರ ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ.
ಡಾ. ಅಮೂಲ್ಯಾ ನೇತೃತ್ವದ ವೈದ್ಯಕೀಯ ತಂಡ ತಾವರೆಕೆರೆ ಗ್ರಾಮಕ್ಕೆ ಹೋಗಿ ಮೃತ ವೃದ್ಧೆಯ ಎರಡು ಕಣ್ಣುಗಳನ್ನ ತೆಗೆದು ಅದನ್ನು ತುಮಕೂರು ಐ ಬ್ಯಾಂಕ್ಗೆ ಕಳುಹಿಸಿದರು.
ಇದನ್ನೂ ಓದಿ:Mysore: ಭಾಗಶಃ ಕುಸಿತಗೊಂಡ ಮನೆಯೊಳಗೆ ಸಿಲುಕಿದ್ದ ಐವರನ್ನು ರಕ್ಷಿಸಿದ ಅಗ್ನಿಶಾಮಕ ದಳ
ಈ ಬಗ್ಗೆ ಮಾತನಾಡಿದ ಪುತ್ರ ಜಿ. ಶಿವಕುಮಾರ್, ನಮ್ಮ ತಾಯಿಯ ಕಣ್ಣು ದಾನ ಮಾಡಲು ದಿ. ನಟರಾದ ಡಾ. ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಮೇಲೆ ಇದ್ದ ಅಭಿಮಾನವೇ ಕಾರಣ ಎಂದು ತಿಳಿಸಿದರು.