ಕರ್ನಾಟಕ

karnataka

ETV Bharat / city

ಅದ್ಧೂರಿ ಆಚರಣೆಗಳಿಗೆ ಬ್ರೇಕ್: ಪಾತಾಳಕ್ಕೆ ಕುಸಿದ ಕೇಕ್ ಬೇಡಿಕೆ

ಕೊರೊನಾ ವೈರಸ್​ ಹರಡುವಿಕೆ ಹಿನ್ನೆಲೆ, ಅದ್ಧೂರಿ ಆಚರಣೆಗಳಿಗೆ ಬ್ರೇಕ್​ ಹಾಕಲಾಗಿದೆ. ಹೀಗಾಗಿ ಜನರು ಕೇಕ್​ ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದಾಗಿ ಬೇಕರಿ ಮಾಲೀಕರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

a-huge-loss-to-the-bakery-owner
ಅದ್ಧೂರಿ ಆಚರಣೆಗಳಿಗೆ ಬ್ರೇಕ್: ಪಾತಾಳಕ್ಕೆ ಕುಸಿದ ಕೇಕ್ ಬೇಡಿಕೆ

By

Published : Dec 30, 2020, 5:21 PM IST

ತುಮಕೂರು: ಕ್ರಿಸ್​ಮಸ್​ ಹಾಗೂ ನೂತನ ವರ್ಷಾಚರಣೆಯನ್ನು ಸರಳವಾಗಿ ಆಚರಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಹಿನ್ನೆಲೆ, ಈ ಬಾರಿ ಕೇಕ್​ ಮಾರಾಟದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.

ಅದ್ಧೂರಿ ಆಚರಣೆಗಳಿಗೆ ಬ್ರೇಕ್: ಪಾತಾಳಕ್ಕೆ ಕುಸಿದ ಕೇಕ್ ಬೇಡಿಕೆ

ಕೊರೊನಾ ವೈರಸ್​ ಹರಡುವಿಕೆ ಹಿನ್ನೆಲೆ, ಅದ್ಧೂರಿ ಆಚರಣೆಗಳಿಗೆ ಬ್ರೇಕ್​ ಹಾಕಲಾಗಿದ್ದು, ಜನರು ಕೇಕ್​ ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದಾಗಿ ಬೇಕರಿ ಮಾಲೀಕರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿವರ್ಷ ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆ ಬಂತೆಂದರೆ ಕೇಕ್​ಗಳಿಗೆ ಭಾರಿ ಬೇಡಿಕೆ ಇರುತ್ತಿತ್ತು. ಸಣ್ಣ-ಪುಟ್ಟ ಬೇಕರಿಗಳಲ್ಲೂ ಸಹ 800 ರಿಂದ 1,000 ಕೇಕ್​ ತಯಾರಿಸಿ ಕೊಡಲು ಮುಂಗಡ ಬುಕ್ಕಿಂಗ್ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೇಕ್​ ಕೊಳ್ಳಲು ಜನರು ಮುಂದೆ ಬರುತ್ತಿಲ್ಲ.

ಇನ್ನು, ಪ್ರತಿಬಾರಿ ಕಾಲೇಜು ವಿದ್ಯಾರ್ಥಿಗಳಿಂದ ಕೇಕ್​ಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಕಳೆದ 10 ತಿಂಗಳಿನಿಂದ ಕಾಲೇಜುಗಳು ಕೂಡ ಬಂದ್ ಆಗಿರುವುದರಿಂದ ನಗರದಲ್ಲಿರುವ ವಿದ್ಯಾರ್ಥಿಗಳು ತಮ್ಮ ಮನೆ ಸೇರಿದ್ದಾರೆ. ಹೀಗಾಗಿ ವ್ಯಾಪಾರವಿಲ್ಲದೆ ಬೇಕರಿ ಮಾಲೀಕರು ಸಂಕಷ್ಟದಲ್ಲಿದ್ದಾರೆ.

ABOUT THE AUTHOR

...view details