ಶಿವಮೊಗ್ಗ: 73ನೇ ಗಣರಾಜ್ಯೋತ್ಸವದ ನಿಮಿತ್ತ ಶಿವಮೊಗ್ಗದ ಅಶ್ರಮ ಶಾಲೆಗೆ ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪುಸ್ತಕಗಳನ್ನು ಕೊಡುಗೆ ನೀಡಲಾಯಿತು.
ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ದತ್ತು ಪಡೆದುಕೊಂಡಿರುವ ಶಾಲೆಗಳ ಗ್ರಂಥಾಲಯಕ್ಕೆ 73ನೇ ಗಣರಾಜ್ಯೋತ್ಸವದ ನಿಮಿತ್ತ ರಾಷ್ಟ್ರಕವಿ ಕುವೆಂಪುರವರ ಭಂಡಾರದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಾಗರ ನಗರಸಭೆ ವ್ಯಾಪ್ತಿಯ ಎಸ್ಎನ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ದತ್ತು ಪಡೆದುಕೊಂಡಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಬಕ್ಷಿ ಅವರಿಗೆ ಟ್ರಸ್ಟ್ ರಾಜ್ಯಾಧ್ಯಕ್ಷ ಕೃಷ್ಣ ಕಿಟ್ಟಿ ಅವರು ರಾಷ್ಟ್ರ ಕವಿ ಕುವೆಂಪು ಅವರ ಭಂಡಾರದ ಪುಸ್ತಕಗಳನ್ನು ಹಸ್ತಾಂತರ ಮಾಡಿದರು. ಅದೇ ರೀತಿ ಟ್ರಸ್ಟ್ನ ಇನ್ನೂಂದು ತಂಡ ಚಿತ್ರದುರ್ಗದ ಶಾಲೆಗಳಿಗೂ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.