ಕರ್ನಾಟಕ

karnataka

ETV Bharat / city

ಮೂರು ಕೋಟಿ ವೆಚ್ಚದಲ್ಲಿ 'ಸ್ಮಾರ್ಟ್ ಗ್ರಂಥಾಲಯ '

ನಗರದ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು 'ಸ್ಮಾರ್ಟ್ ಸಿಟಿ' ಯೋಜನೆ ಅಡಿಯಲ್ಲಿ ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಗ್ರಂಥಾಲಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯ

By

Published : Feb 24, 2019, 1:35 PM IST

ಶಿವಮೊಗ್ಗ ನಗರ 'ಸ್ಮಾರ್ಟ್ ಸಿಟಿ' ಆಯ್ಕೆಯಾಗಿ ಎರಡು ವರ್ಷಗಳು ಕಳೆದಿವೆ, ರಸ್ತೆ ,ಯುಜಿಡಿ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದೀಗ ನಗರದ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯ 24x7 ಸೇವೆಯನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ.

1979ರಲ್ಲಿ ತೆರೆಯಲಾದ ನಗರ ಕೇಂದ್ರ ಗ್ರಂಥಾಲಯ. ಗ್ರಾಮಾಂತರ ಭಾಗದ ಸಾವಿರಾರು ಒದುಗರು ಗ್ರಂಥಾಲಯದ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರಸ್ತುತ 20 ಸಾವಿರ ಸದಸ್ಯರನ್ನು ಕೇಂದ್ರ ಗ್ರಂಥಾಲಯ ಹೊಂದಿದೆ.

ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯ

ಐದು ಲಕ್ಷ ಕ್ಕೂ ಹೆಚ್ಚಿನ ಪುಸ್ತಕಗಳು ,ಕಂಪ್ಯೂಟರ್ ಲ್ಯಾಬ್, ಬೆಳಿಗ್ಗೆ 8.30 ಗಂಟೆ ಯಿಂದ ರಾತ್ರಿ ಎಂಟು ಗಂಟೆಯವರೆಗೆ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತದೆ. ದಿನವೊಂದಕ್ಕೆ 250 ರಿಂದ 300 ಕ್ಕೂ ಹೆಚ್ಚು ಓದುಗರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ, ಇನ್ನು ಪರೀಕ್ಷಾ ದಿನಗಳಲ್ಲಿ ಕೇಂದ್ರ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ದ್ವಿಗುಣವಾಗುತ್ತಿದ್ದು ಈ ಹಿನ್ನೆಲೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಕೇಂದ್ರ ಗ್ರಂಥಾಲಯವನ್ನ 24x7 ಗೆ ವಿಸ್ತರಿಸಲು ರೂಪರೇಷೆಗಳು ತಯಾರಾಗಿದ್ದು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು

ಇನ್ನು ಕೇಂದ್ರ ಗ್ರಂಥಾಲಯ ಆವರಣದಲ್ಲಿ ಸಾಕಷ್ಟು ಮರಗಳಿದ್ದು ಓದುಗರಿಗೆ ಸಾಕಷ್ಟು ಅನುಕೂಲವಾಗುವ ವಾತಾವರಣ ನಿರ್ಮಾಣವಾಗಿದೆ, ಹಾಗಾಗಿ ಗ್ರಂಥಾಲಯ ಆವರಣದಲ್ಲಿ 100ಕ್ಕೂ ಹೆಚ್ಚು ಮಂದಿ ಓದುಗರಿಗೆ ಓದುವಂತಹ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಆವರಣದ ನೆಲ ಭಾಗಕ್ಕೆ ಗ್ರೀನ್ ಮ್ಯಾಟ್ ಹಾಕಿ 'ಗ್ರೀನ್ ಲೈಬ್ರರಿ' ಸೃಷ್ಟಿಸಲಾಗುತ್ತದೆ, ಅಲ್ಲದೆ ಓದುಗರಿಗೆ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ದಿನದ 24 ಗಂಟೆಗಳ ಕಾಲ ಗ್ರಂಥಾಲಯ ಕಾರ್ಯ ನಿರ್ವಹಿಸಲಿದೆಯಂತೆ.

ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಹಗಲು ವೇಳೆ ಕೆಲಸ ಮಾಡಿ ರಾತ್ರಿ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಓದುಗರು. ಈಗಾಗಲೇ ನಗರ ಕೇಂದ್ರ ಗ್ರಂಥಾಲಯ 12 ಗಂಟೆ ಕಾಲಾವಧಿಯಲ್ಲಿ ದಿನವೊಂದಕ್ಕೆ 250 ಕ್ಕೂ ಹೆಚ್ಚು ಮಂದಿ ಓದುವ ಮೂಲಕ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ABOUT THE AUTHOR

...view details