ಕರ್ನಾಟಕ

karnataka

ETV Bharat / city

ಕಲ್ಲುಬಂಡೆ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ

ಇಲ್ಲಿನ ಬಂಡೆ ಕಾರ್ಮಿಕರ ಕೂಲಿಯನ್ನು ನಂಬಿ ಬದುಕುತ್ತಿರುವ ಸಾವಿರಾರು ಜನರು ಬೀದಿಪಾಲಾಗುವ ಸಮಯ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರ ಅನ್ನ ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆ
ಪ್ರತಿಭಟನೆ

By

Published : Jan 30, 2021, 4:01 PM IST

Updated : Jan 30, 2021, 10:54 PM IST

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಕಲ್ಲುಬಂಡೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಗ್ರಾಮ‌ ಪಂಚಾಯತ್ ಸದಸ್ಯ ನಿಶ್ಚಲ್ ಜಾದೂಗಾರ್ ತಾಲೂಕು ಕಚೇರಿ ಮುಂಭಾಗ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಮೇಲಿನ ಕುರುವಳ್ಳಿಯಲ್ಲಿಯಲ್ಲಿ ಬಂಡೆ ಕಾರ್ಮಿಕರನ್ನು ಉಪವಾಸ ಕೆಡುವುತ್ತಿರುವ ವ್ಯವಸ್ಥೆಯ ಷಡ್ಯಂತ್ರದ ವಿರುದ್ಧ ಪ್ರತಿಭಟಿಸಿದ್ದಲ್ಲದೆ. ಗಾಂಧೀಜಿಯ ಪುಣ್ಯಸ್ಮರಣೆ ಮಾಡಲಾಯಿತು.

ಇಲ್ಲಿನ ಬಂಡೆ ಕಾರ್ಮಿಕರ ಕೂಲಿಯನ್ನು ನಂಬಿ ಬದುಕುತ್ತಿರುವ ಸಾವಿರಾರು ಜನರು ಬೀದಿಪಾಲಾಗುವ ಸಮಯ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರ ಅನ್ನ ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಬಂಡೆ ಕಾರ್ಮಿಕರಿಗೆ ಕೆಲಸ ಕೊಡಿ ಎಂದು ಗ್ರಾಮ ಪಂಚಾಯತ್ ಸದಸ್ಯ ನಿಶ್ಚಲ್ ಜಾದೂಗಾರ್ ಹಾಗೂ ಸುಧಾ ಕೃಷ್ಣಕುಮಾರ್ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ನಡೆಸಿ, ತಹಶೀಲ್ದಾರ್​​ಗೆ ಮನವಿ ಸಲ್ಲಿಸಿದರು.

ಈ ವೇಳೆ ಶರತ್ ತೀರ್ಥಹಳ್ಳಿ, ನಿರಂಜನ್ ವಿ. ಪ್ರದೀಪ್, ಕುರುವಳ್ಳಿ ನಾಗರಾಜ್ ಪೂಜಾರಿ, ಭರತ್ ಹೂಗಾರ್ ಇನ್ನಿತರರು ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಸ್ಥಳದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ದೆಹಲಿ ರೈತ ಚಳವಳಿ ಬೆಂಬಲಿಸಿ ಶಿವಮೊಗ್ಗದಲ್ಲಿ ರೈತರ ಉಪವಾಸ ಸತ್ಯಾಗ್ರಹ

Last Updated : Jan 30, 2021, 10:54 PM IST

ABOUT THE AUTHOR

...view details