ಶಿವಮೊಗ್ಗ :ಎಐಸಿಸಿಗೆ ಇನ್ನೂ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್ಗೆ ಆಗಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ವ್ಯಂಗ್ಯವಾಗಿ ಹೇಳಿದ್ದಾರೆ.
ನಗರ ಘಟಕದ ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಕಾರ್ಯಕ್ರಮ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಘಟಕದ ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಎಐಸಿಸಿಗೆ ಇನ್ನೂ ಖಾಯಂ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಆಗದೇ, ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಈ ವೇಳೆಯಲ್ಲಿ ಬಿಜೆಪಿ ತನ್ನ ಬೂತ್ ಅಧ್ಯಕ್ಷರಿಗೆ ರಾಜ್ಯ ಘಟಕದಿಂದಲೇ ನಾಮಫಲಕ ನೀಡುತ್ತಿದೆ. ಪ್ರಪಂಚದಲ್ಲಿಯೇ ಯಾವ ಪಕ್ಷವೂ ಮಾಡದ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:'ನನ್ನಂತವನು ಬಂದ್ರೂ ಬಗ್ಗಲ್ಲ ಅಂದ್ರೇ, ಮತ್ಯಾರೀಗೆ ಬಂಗ್ತೀರಾ ಹೇಳ್ರೋ ಮಾರಾಯ..'
ಪಕ್ಷದ ಬೂತ್ ಅಧ್ಯಕ್ಷ ತನ್ನ ವಾರ್ಡ್ನ ಸಮಸ್ಯೆಯನ್ನು ತಾನೇ ಪರಿಹರಿಸಬೇಕು. ಬೂತ್ ಅಧ್ಯಕ್ಷರ ಬಳಿ ಹೋದ್ರೆ ತಮ್ಮ ಕೆಲಸವಾಗುತ್ತದೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕಿದೆ. ವಾರ್ಡ್ನ ನಾಗರಿಕರು ತಮ್ಮ ಕೆಲಸಗಳಿಗೆ ಬೇರೆಯವರ ಬಳಿ ಹೋಗುವುದನ್ನು ತಪ್ಪಿಸಬೇಕಿದೆ.
ಹಿಂದೆ ನಮ್ಮ ಮೋರ್ಚಾಗಳಿಗೆ ಅಧ್ಯಕ್ಷರುಗಳು ಇರುತ್ತಿರಲಿಲ್ಲ. ಹಿಂದೆ ನಾನು ಯುವ ಮೂರ್ಚಾದ ರಾಜ್ಯಾಧ್ಯಕ್ಷರಾದಾಗ ಪ್ರತಿ ಬೂತ್ಗೆ ಕನಿಷ್ಟ 10 ಕಾರ್ಯಕರ್ತರನ್ನು ನೇಮಕ ಮಾಡಬೇಕು ಅಂತಾ ಹೇಳಿದ್ದೆ, ಅದು ಈಗ ಸಾಧ್ಯವಾಗುತ್ತಿದೆ ಎಂದರು.