ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರಿಂದ ಜಿಲ್ಲಾಧಿಕಾರಿಗಳು ಶಿವಮೊಗ್ಗ ನಗರದ ಸುತ್ತಮುತ್ತ ಇರುವ ವಸತಿ ಶಾಲೆ ಹಾಗೂ ಸಭಾ ಭವನಗಳ ಪರಿಶೀಲನೆ ನಡೆಸಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ: ಶಿವಮೊಗ್ಗ ಡಿಸಿಯಿಂದ ಚಿಕಿತ್ಸಾ ಕೇಂದ್ರಗಳ ಪರಿಶೀಲನೆ - Shimoga
ಶಿವಮೊಗ್ಗ ಡಿಸಿ ಕೆ.ಬಿ.ಶಿವಕುಮಾರ್, ಇಂದು ಶಿವಮೊಗ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಹನಸವಾಡಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ, ಭದ್ರಾವತಿಯ VISL ಆಸ್ಪತ್ರೆ ಮತ್ತು ಭದ್ರಾವತಿಯ ದೇವರನರಸಿಪುರದ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಡಿಸಿಯಿಂದ ಚಿಕಿತ್ಸಾ ಕೇಂದ್ರಗಳ ಪರಿಶೀಲನೆ
ಡಿಸಿ ಕೆ.ಬಿ.ಶಿವಕುಮಾರ್, ಮೊದಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹನಸವಾಡಿ ಗ್ರಾಮದ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆ, ಭದ್ರಾವತಿಯ VISL ಆಸ್ಪತ್ರೆ ಮತ್ತು ಭದ್ರಾವತಿಯ ದೇವರನರಸಿಪುರದ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿದರು.
ಜೊತೆಗೆ ಕೊರೊನಾ ವಿಚಾರವಾಗಿ ಆಯಾ ತಾಲೂಕಿನ ತಹಶೀಲ್ದಾರ್ ಜೊತೆ ಸೇರಿ ಪರಿಶೀಲನೆ ನಡೆಸಿದರು.