ಕರ್ನಾಟಕ

karnataka

ETV Bharat / city

20 ವರ್ಷಗಳಿಂದ ಉಚಿತ ಯೋಗ ಶಿಕ್ಷಣ... ಶಿವಮೊಗ್ಗದಲ್ಲಿ ಹೀಗೊಂದು ಯೋಗ ಕೇಂದ್ರ!

ಯೋಗವನ್ನು ವಿಶ್ವಕ್ಕೆ ಹೇಳಿಕೊಟ್ಟ ಭಾರತದಲ್ಲಿ ಇತ್ತಿಚೇಗೆ ಯೋಗದ ಬಗ್ಗೆ ಅರಿವು ಜಾಸ್ತಿ ಆಗುತ್ತಿದೆ. ಯೋಗ ಕಲಿತವ ನಿರೋಗಿ ಅನ್ನುತ್ತಾರೆ. ಇದರಿಂದ ಯೋಗ ಕಲಿಯುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಶಿವಮೊಗ್ಗದಲ್ಲೊಬ್ಬರು ಕಳೆದ 20 ವರ್ಷಗಳಿಂದ ಉಚಿತವಾಗಿ ಯೋಗವನ್ನು ಹೇಳಿ ಕೊಡುತ್ತಿದಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.

ಶಿವಮೊಗ್ಗದಲ್ಲಿ ಹೀಗೊಂದು ಯೋಗ ಕೇಂದ್ರ

By

Published : Jun 21, 2019, 10:52 AM IST

ಶಿವಮೊಗ್ಗ:ಇಲ್ಲೊಬ್ಬರು ಕಳೆದ 20 ವರ್ಷಗಳಿಂದ ಯೋಗಾಸಕ್ತರಿಗೆ ಯೋಗ ಹೇಳಿ ಕೊಡುತ್ತಿದ್ದಾರೆ. ಅದು ಕೂಡಾ ಉಚಿತವಾಗಿ. ಈ ಮೂಲಕ ಯಾವುದೇ ಹಣ ಗಳಿಕೆಯ ಉದ್ದೇಶವಿಲ್ಲದೆ ಹಲವರಿಗೆ ಆರೋಗ್ಯ ಭಾಗ್ಯ ತಂದುಕೊಟ್ಟಿದ್ದಾರೆ.

ಮೂಲತಃ ಚಿಕ್ಕಮಗಳೂರಿನವರಾಗಿರುವ ರುದ್ರಾರಾಧ್ಯ, ಸದ್ಯ ಶಿವಮೊಗ್ಗದಲ್ಲಿ ನೆಲೆಸಿ, ಯೋಗದ ಕಂಪನ್ನು ಹರಡುತ್ತಿದ್ದಾರೆ.

ಶಿವಗಂಗಾ ಯೋಗ ಕೇಂದ್ರದ ಸ್ಥಾಪನೆ...

ರುದ್ರಾರಾಧ್ಯರವರು ಶಿವಮೊಗ್ಗದ ವಿನೋಬಾನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ಶಿವಗಂಗಾ ಯೋಗ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಎಲ್ಲಾ ವಯೋಮಾನದವರಿಗೆ ಯೋಗವನ್ನು ಹೇಳಿ ಕೊಡಲಾಗುತ್ತಿದೆ. ಅದು ಕೂಡಾ ಉಚಿತವಾಗಿ. ಇವರ ಬಳಿ ಸಾವಿರಾರು ಜನ ಯೋಗವನ್ನು ಕಲಿತುಕೊಂಡು ಹೋಗಿದ್ದಾರೆ. ರುದ್ರಾರಾಧ್ಯರು ಬೆಳಗ್ಗೆ ಹಾಗೂ ಸಂಜೆ ಯಾವುದೇ ಅಹಂ ತೋರದೆ ಎಲ್ಲರಿಗೂ ತಾವೇ ಯೋಗವನ್ನು ಹೇಳಿ ಕೊಡುತ್ತಾ ಸಾಗಿದ್ದಾರೆ.

ಶಿವಮೊಗ್ಗದಲ್ಲಿ ಹೀಗೊಂದು ಯೋಗ ಕೇಂದ್ರ

ಯೋಗ ಎಲ್ಲರು ಕಲಿಯಬೇಕು ಹಾಗೂ ಕಲಿಸಬೇಕು ಎಂಬ ಉದ್ದೇಶ ಹಾಗೂ ಪ್ರಧಾನಿ ಮೋದಿಯವರು ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಮಾಡಿದ ನಂತರ ರುದ್ರಾರಾಧ್ಯರು ಪಿಜಿ ಡಿಪ್ಲೋಮಾ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. ಇದಕ್ಕೆ ಕುವೆಂಪು ವಿಶ್ವವಿದ್ಯಾನಿಲಯ ಮಾನ್ಯತೆ ಸಹ ನೀಡಿದೆ. ವಿಶ್ವವಿದ್ಯಾನಿಲಯದ ಹೊರಗೆ ಇರುವ ರಾಜ್ಯದ ಏಕೈಕ ಪಿಜಿ ಡಿಪ್ಲೋಮಾ ಕೇಂದ್ರ ಇದಾಗಿದೆ. ಯೋಗವನ್ನು ಶಿಕ್ಷಣದಲ್ಲಿ ತಂದ ನಂತರ ಪಿಜಿ ಡಿಪ್ಲೋಮಾ ಕೇಂದ್ರ ತೆರೆದರು. ಇದು ಒಂದು ವರ್ಷದ ಕೋರ್ಸ್ ಆಗಿದ್ದು, ಸದ್ಯ 50 ಜನ ಇಲ್ಲಿ ಕಲಿಯುತ್ತಿದ್ದಾರೆ. ಈ ವರ್ಷ 50 ಜನ ಯೋಗ ಶಿಕ್ಷಕರಾಗಿ ಹೊರ ಬರಲಿದ್ದಾರೆ. ಮುಂದೆ ಇವರೆಲ್ಲಾ ಯೋಗವನ್ನು ವಿದ್ಯಾರ್ಥಿಗಳಿಗೆ ಕಲಿಸಲಿದ್ದಾರೆ. ಈ ಮೂಲಕ ಯೋಗವನ್ನು ಪಸರಿಸಲು ತಮ್ಮ ಸಣ್ಣ ಪ್ರಯತ್ನ ಮಾಡುತ್ತಿದ್ದಾರೆ.

ಯೋಗವನ್ನು ಯಾವುದೇ ಹಣಕಾಸಿನ ನೀರಿಕ್ಷೆ ಇಲ್ಲದೆ ಕಲಿಸುತ್ತಿದ್ದಾರೆ. ಇವರು ಯಾವುದೇ ಕರ್ಮಷಿಯಲ್ ಮೈಂಡ್ ಇಲ್ಲದೆ ಯೋಗ ಹೇಳಿ ಕೊಡುತ್ತಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲೂ ಯೋಗವನ್ನು ಕಲಿಯುತ್ತಾ ಕಲಿಸುತ್ತಿದ್ದಾರೆ. ಯೋಗ ಮನಸ್ಸಿಗೆ ಮುದ ನೀಡುತ್ತದೆ. ಮನಸ್ಸು ಆಹ್ಲಾದಕರವಾಗಿರುತ್ತದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಮಾನಸಿಕ ಸಮಸ್ಯೆ ಹಾಗೂ ಆರೋಗ್ಯದಲ್ಲಿ ಸಮಸ್ಯೆ ಇದ್ದವರು ಇಲ್ಲಿ ಬಂದು ತಮ್ಮ ಆರೋಗ್ಯವನ್ನು ಸುಧಾರಿಸಿಕೊಂಡವರು ಇದ್ದಾರೆ.

ರುದ್ರಾರಾಧ್ಯರು ಶಿವಮೊಗ್ಗದಲ್ಲಿ ಸುಮಾರು 20 ಕೇಂದ್ರಗಳಲ್ಲಿ ಯೋಗ ಕಲಿಸಿಕೊಡುತ್ತಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ.

For All Latest Updates

TAGGED:

ABOUT THE AUTHOR

...view details