ಕರ್ನಾಟಕ

karnataka

ETV Bharat / city

ಅಮಿತ್​ ಶಾ ಆಧುನಿಕ ವಲ್ಲಭಬಾಯ್ ಪಟೇಲ್: ಸಿಎಂ ಬಿಎಸ್​ವೈ

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಮಿಲ್ಟ್ರಿ ಕ್ಯಾಂಪ್​ನ ಡಿಎಆರ್ ಮೈದಾನದಲ್ಲಿ ನೂತನವಾಗಿ 97ನೇ ಆರ್​ಎಎಫ್ ಬೆಟಾಲಿಯನ್ ಘಟಕ‌ ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮುಖ್ಯಮಂತ್ರಿ ಬಿಎಸ್​​ವೈ ಮಾತನಾಡಿದರು.

Cm BS Yadiyurappa
ಸಿಎಂ ಬಿಎಸ್​ವೈ

By

Published : Jan 16, 2021, 8:07 PM IST

ಶಿವಮೊಗ್ಗ:ಕೇಂದ್ರ ಗೃಹ ಸಚಿವರು ಆಧುನಿಕ ವಲ್ಲಭಭಾಯ್ ಪಟೇಲ್ ಎಂದು ಸಿಎಂ ಯಡಿಯೂರಪ್ಪ ಅಮಿತ್​ ಶಾ ಅವರನ್ನ ಸಂಭೋಧಿಸಿದ್ದಾರೆ.

ಆರ್​ಎಎಫ್ ಬೆಟಾಲಿಯನ್ ಘಟಕ‌ ಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಮಿಲ್ಟ್ರಿ ಕ್ಯಾಂಪ್​ನ ಡಿಎಆರ್ ಮೈದಾನದಲ್ಲಿ ನೂತನವಾಗಿ 97ನೇ ಆರ್​ಎಎಫ್ ಬೆಟಾಲಿಯನ್ ಘಟಕ‌ ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಂದು ಭದ್ರಾವತಿಯಲ್ಲಿ ಆರ್​ಎಎಫ್ ಬೆಟಾಲಿಯನ್ ಸ್ಥಾಪನೆಯಾಗುತ್ತಿರುವುದು ಅವಿಸ್ಮರಣೀಯ ದಿನವಾಗಿದೆ. ಬಹುದಿನದ‌ ಕನಸು ಈಡೇರಿದಂತೆ ಆಗಿದೆ ಎಂದರು.

ಇದನ್ನೂ ಓದಿ:1,500 ಕೋಟಿ ರೂ. ವೆಚ್ಚದಲ್ಲಿ ಕ್ಷಿಪ್ರ ಕಾರ್ಯ ಪಡೆ ಘಟಕ ನಿರ್ಮಾಣ: ಗೃಹ ಸಚಿವ ಅಮಿತ್ ಶಾ

ಈ ಬೆಟಾಲಿಯನ್ ಕಾನೂನು ಸುವ್ಯಸ್ಥೆ ಕಾಪಾಡಲು ಸಾಧ್ಯವಾಗಿದೆ. ಉತ್ತಮ‌ ಸಾರಿಗೆ ಸಂಪರ್ಕ ಲಭ್ಯವಿರುವ ಕಡೆ ಬೆಟಾಲಿಯನ್ ಸ್ಥಾಪನೆಯಾಗುತ್ತಿದೆ. ಇದು ಕಾರ್ಯವ್ಯಾಪ್ತಿ ಪ್ರಸ್ತಾಪ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮೈಲಿಗಲ್ಲು. ಇದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಫಲವಾಗಲಿದೆ. ಅಮಿತ್ ಶಾ ಕಾರ್ಯ ಒತ್ತಡದ ನಡುವೆ ಬಂದು ಭೂಮಿ ಪೂಜೆ ನಡೆಸಿದ್ದು, ಅವರು ನಮ್ಮ ಪಾಲಿನ ಸರ್ದಾರ್ ವಲ್ಲಭಭಾಯ್ ಪಟೇಲರಾಗಿದ್ದಾರೆ ಎಂದರು.

ABOUT THE AUTHOR

...view details