ಶಿವಮೊಗ್ಗ: ಜಿಲ್ಲೆಯಲ್ಲಿ ಬಿಜೆಪಿ ಮುಖಂಡನ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಲವು ದಿನಗಳ ಹಿಂದೆ ಯುವ ಬಿಜೆಪಿ ಮುಖಂಡನೋರ್ವ ನಾಪತ್ತೆಯಾಗಿದ್ದ. ಹೀಗೆ ನಾಪತ್ತೆಯಾದ ಎರಡ್ಮೂರು ದಿನದ ಬಳಿಕ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿ ಸಿಕ್ಕಿದ್ದು ಹೇಗೆ ಗೊತ್ತೇ?
ರಾಜಕೀಯ ವೈಷಮ್ಯ:ಸೊರಬ ತಾಲೂಕಿನ ಮನ್ಮನೆ ಗ್ರಾಮದ ಲೇಖಪ್ಪ(36) ಕೊಲೆಯಾದ ವ್ಯಕ್ತಿ. ಲೇಖಪ್ಪ ತನ್ನ ಗ್ರಾಮದಲ್ಲಿ ಒಳ್ಳೆಯ ಹೆಸರು ಹೊಂದಿದ್ದ. ಚಿಕ್ಕ ವಯಸ್ಸಿನಲ್ಲೇ ರಾಜಕೀಯವಾಗಿ ಬೆಳೆಯುತ್ತಿದ್ದು ಮದುವೆಗಾಗಿ ಕನ್ಯೆ ಹುಡುಕುತ್ತಿದ್ದ. ಇದನ್ನು ಸಹಿಸದ ಅದೇ ಗ್ರಾಮದ ಕೃಷ್ಣಪ್ಪ ಎಂಬಾತ ಲೇಖಪ್ಪನಿಗೆ ಕನ್ಯೆಯ ಫೋಟೋ ತೋರಿಸಲು ಮನೆಗೆ ಕರೆಸಿಕೊಂಡಿದ್ದಾನೆ. ಬಳಿಕ ಟವಲ್ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ತಿಳಿಯದಂತೆ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಲೇಖಪ್ಪನ ಶವವನ್ನು ಸಮೀಪದ ಕಡಸೂರು ಹೊಳೆಗೆ ಬಿಸಾಡಿ ಬಂದಿದ್ದಾನೆ.
ನಾಪತ್ತೆ ಪ್ರಕರಣ: ಏಪ್ರಿಲ್ 11ರಂದು ಮನೆಯಿಂದ ಜಮೀನು ಕೆಲಸಕ್ಕೆ ಹೋದ ಲೇಖಪ್ಪ ಎರಡ್ಮೂರು ದಿನ ಮನೆಗೆ ಬರಲೇ ಇಲ್ಲ. ಏ.14 ರಂದು ಆತನ ಸಹೋದರ ಹುಚ್ಚಪ್ಪ ಸೊರಬ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಬಳಿಕ ಪೊಲೀಸರು ಶೋಧ ಕಾರ್ಯಾರಂಭಿಸಿದ್ದಾರೆ. ಈ ವೇಳೆ ಲೇಖಪ್ಪನ ಮೃತದೇಹ ಹೊಳೆಯಲ್ಲಿ ಕಾಣಿಸಿಕೊಂಡಿದೆ. ಪೊಲೀಸರು ಆರಂಭದಲ್ಲಿ ಇದೊಂದು ಸಹಜ ಸಾವು ಪ್ರಕರಣವೆಂದೇ ಭಾವಿಸಿ, ತನಿಖೆ ಮುಂದುವರೆಸಿದ್ದರು.
ಇದನ್ನೂ ಓದಿ:ಹರ್ಷ ಕೊಲೆ ಪ್ರಕರಣ: ಪ್ರಚೋದನಾತ್ಮಕ ಹೇಳಿಕೆ ಆರೋಪದಡಿ ಈಶ್ವರಪ್ಪ ವಿರುದ್ಧ ಎಫ್ಐಆರ್