ಕರ್ನಾಟಕ

karnataka

ETV Bharat / city

ಬೆಳಗ್ಗೆ ಬಿಜೆಪಿ, ಸಂಜೆ ಮತ್ತೆ ಕಾಂಗ್ರೆಸ್​: ಇದು ಅರಸಾಳು ಗ್ರಾ.ಪಂ​ ಸದಸ್ಯೆಯ ಜೂಟಾಟ

''ನನಗೆ ರಾಜಕೀಯದ ತಿಳಿವಳಿಕೆ ಅಷ್ಟಾಗಿ ಇಲ್ಲ. ನನ್ನನ್ನು ಗ್ರಾ.ಪಂ. ಸದಸ್ಯರ ಕಾರ್ಯಕ್ರಮವಿದೆ ಎಂದು ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ನನಗೆ ಶಾಲು ಹಾಕಿಸಲಾಯಿತು. ಬಳಿಕವೇ ನನಗೆ ಬಿಜೆಪಿ ಸೇರಿರುವುದಾಗಿ ಗೊತ್ತಾಗಿದ್ದು'' ಎಂದು ಪೂರ್ಣಿಮಾ ಅವರು ತಿಳಿಸಿದ್ದಾರೆ.

arasalu gram panchayat member rejoined to congress
ಬೆಳಗ್ಗೆ ಬಿಜೆಪಿ, ಸಂಜೆ ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಯಾದ ಅರಸಾಳು ಗ್ರಾ.ಪಂ​ ಸದಸ್ಯೆ

By

Published : Dec 8, 2021, 7:30 PM IST

Updated : Dec 8, 2021, 7:58 PM IST

ಶಿವಮೊಗ್ಗ: ನಿನ್ನೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಬೆಳಗ್ಗೆ ಬಿಜೆಪಿ ಆಪರೇಷನ್ ಮೂಲಕ ಬಿಜೆಪಿಗೆ ಬರ ಮಾಡಿಕೊಂಡಿತ್ತು. ಆದರೆ, ಸಂಜೆ ಆಗುವಷ್ಟರಲ್ಲಿ ಕಾಂಗ್ರೆಸ್ ಮತ್ತೆ ಆಪರೇಷನ್ ನಡೆಸಿ ಅದೇ ಗ್ರಾಮ ಪಂಚಾಯತ್ ಸದಸ್ಯರನ್ನು ಪುನಃ ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಸಿಕೊಂಡಿದೆ.

ಬೆಳಗ್ಗೆ ಬಿಜೆಪಿ, ಸಂಜೆ ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಯಾದ ಅರಸಾಳು ಗ್ರಾ.ಪಂ​ ಸದಸ್ಯೆ

ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೊಸನಗರ ತಾಲೂಕಿನ ರಿಪ್ಪನಪೇಟೆಯಲ್ಲಿ ಪ್ರಚಾರ ನಡೆಸುವಾಗ ಅರಸಾಳು ಗ್ರಾಮ ಪಂಚಾಯತ್​ ಸದಸ್ಯೆ ಪೂರ್ಣಿಮ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಸಂಜೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಪುನಃ ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಪೂರ್ಣಿಮಾ ಈ ನಡೆ ಬಿಜೆಪಿ ಮುಖಂಡರು, ಸದಸ್ಯರಲ್ಲಿ, ಸ್ಥಳಿಯರಲ್ಲಿ ಅಚ್ಚರಿ ಉಂಟು ಮಾಡಿದೆ.

ಇದನ್ನೂ ಓದಿ:ಅಪ್ಪನ ವಿರುದ್ಧವೇ ಸಾಕ್ಷಿ ನುಡಿದ ಬಾಲಕ: ಕುಡಿದ ನಶೆಯಲ್ಲಿ ಪತ್ನಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ

ನನಗೆ ರಾಜಕೀಯದ ತಿಳಿವಳಿಕೆ ಅಷ್ಟಾಗಿ ಇಲ್ಲ. ನನ್ನನ್ನು ಗ್ರಾ.ಪಂ. ಸದಸ್ಯರ ಕಾರ್ಯಕ್ರಮವಿದೆ ಎಂದು ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ನನಗೆ ಶಾಲು ಹಾಕಿಸಲಾಯಿತು. ಬಳಿಕವೇ ನನಗೆ ಈ ಬಗ್ಗೆ ಗೊತ್ತಾಗಿದ್ದು ಎಂದು ಪೂರ್ಣಿಮಾ ಅವರು ತಿಳಿಸಿದ್ದಾರೆ. ಅಲ್ಲದೇ ನಾನು ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿರುವುದರಿಂದ ನಾನು ಪುನಃ ಕಾಂಗ್ರೆಸ್​ಗೆ ಮರಳಿದ್ದೇನೆ ಎಂದು ಪೂರ್ಣಿಮಾ ತಿಳಿಸಿದ್ದಾರೆ.

Last Updated : Dec 8, 2021, 7:58 PM IST

ABOUT THE AUTHOR

...view details