ಶಿವಮೊಗ್ಗ: ತಾನು ಪ್ರೀತಿಸುತ್ತಿದ್ದ ಯುವತಿ ಬೇರೆಯವರನ್ನು ಲವ್ ಮಾಡುತ್ತಿರುವ ವಿಷಯ ತಿಳಿದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬ್ಯಾಡನಾಳ ಗ್ರಾಮದಲ್ಲಿ ನಡೆದಿದೆ. ಬ್ಯಾಡನಾಳ ಗ್ರಾಮದ ವಿನಯ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಶಿವಮೊಗ್ಗದ ನ್ಯಾಶನಲ್ ಫಾರ್ಮಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ.
ಪ್ರೀತಿಸಿದ ಹುಡುಗಿ ಬೇರೆಯವರನ್ನು ಲವ್ ಮಾಡುತ್ತಿರುವ ವಿಷಯ ತಿಳಿದು ಯುವಕ ಆತ್ಮಹತ್ಯೆ - Kumsi Police Station
ಶಿವಮೊಗ್ಗದ ನ್ಯಾಶನಲ್ ಫಾರ್ಮಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾನು ಪ್ರೀತಿಸಿದ ಹುಡುಗಿ ಬೇರೆಯವರನ್ನು ಲವ್ ಮಾಡುತ್ತಿರುವ ವಿಷಯ ತಿಳಿದು ವಿಷ ಸೇವಿಸಿದ್ದಾನೆ.
ತಾನು ಇಷ್ಟಪಟ್ಟಿದ್ದ ಯುವತಿ ಬೇರೆಯವರನ್ನು ಪ್ರೀತಿಸಿದ ಕಾರಣ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ವಿನಯ್ ಕುಟುಂಬಕ್ಕೆ ಅಷ್ಟೊಂದು ಆಸ್ಪತ್ರೆ ಶುಲ್ಕ ಕಟ್ಟಲು ಸಾಧ್ಯವಾಗದ ಕಾರಣ ಪುನಃ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸಹೋದರರಂತೆ ಸರ್ಕಾರಿ ನೌಕರಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ