ಕರ್ನಾಟಕ

karnataka

ETV Bharat / city

ಹಿಜಾಬ್-ಕೇಸರಿ ಸಂಘರ್ಷ : ಶಿವಮೊಗ್ಗ ಕಾಲೇಜು ಎದುರು ಪ್ರತಿಭಟನೆ ವೇಳೆ ಕಲ್ಲು ತೂರಾಟ, 7 ವಿದ್ಯಾರ್ಥಿಗಳಿಗೆ ಗಾಯ

ಕಾಲೇಜಿನಿಂದ ಹೊರಗೆ ಹೋದ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುವಾಗ ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ 7 ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ತಲೆ ಹಾಗೂ ಮುಖಕ್ಕೆ ಗಾಯಗಳಾಗಿವೆ. ಇವರನ್ನು ಸಾಗರದ ಉಪವಿಭಾಗಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

students-injured
ವಿದ್ಯಾರ್ಥಿಗಳಿಗೆ ಗಾಯ

By

Published : Feb 8, 2022, 5:38 PM IST

Updated : Feb 8, 2022, 7:32 PM IST

ಸಾಗರ/ಶಿವಮೊಗ್ಗ:ಹಿಜಾಬ್-ಕೇಸರಿ ಶಾಲು ಸಂಘರ್ಷದಲ್ಲಿ 7 ಜನ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಸಾಗರ ಪಟ್ಟಣದಲ್ಲಿ ಇಂದು ಮುಂಜಾನೆ ನಡೆದಿದೆ.

ಸಾಗರ ಪಟ್ಟಣದ ಬಿ ಹೆಚ್ ರಸ್ತೆಯ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಕ್ಕೆ, ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಯಾರು ಸಹ ತರಗತಿಗೆ ಹಾಜರಾಗದೇ ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗ ಕಾಲೇಜು ಎದುರು ಪ್ರತಿಭಟನೆ ವೇಳೆ ಕಲ್ಲು ತೂರಾಟ, 7 ವಿದ್ಯಾರ್ಥಿಗಳಿಗೆ ಗಾಯ

ಈ ವೇಳೆ ಕಾಲೇಜಿನಿಂದ ಹೊರಗೆ ಹೋದ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುವಾಗ ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ 7 ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ತಲೆ ಹಾಗೂ ಮುಖಕ್ಕೆ ಗಾಯಗಳಾಗಿವೆ. ಇವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಾಸಕರ ಮುಂದೆ ಥಳಿತ-ವಿಡಿಯೋ ವೈರಲ್

ಗಾಯಗೊಂಡ 7 ವಿದ್ಯಾರ್ಥಿಗಳ ಆರೋಗ್ಯ ವಿಚಾರಣೆ ಮಾಡಲು ಶಾಸಕ ಹರತಾಳು ಹಾಲಪ್ಪ ಅವರು ಆಸ್ಪತ್ರೆಗೆ ಹೋದಾಗ ಅಲ್ಲಿ ಜಮಾಯಿಸಿದ್ದ ಹಿಂದು ಯುವಕರು ನಮ್ಮ ಸಹೋದರರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದವರನ್ನು ಬಂಧಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ಇದೇ ವೇಳೆ ಆಸ್ಪತ್ರೆಯಲ್ಲಿದ್ದ ತಮ್ಮ ಸಂಬಂಧಿಯ ಆರೋಗ್ಯ ವಿಚಾರಣೆಗೆ ಬಂದಿದ್ದ ಅನ್ಯಕೋಮಿನ ಯುವಕನನ್ನು ಹಿಡಿದು ಶಾಸಕರ ಎದುರೇ ಥಳಿಸಲಾಗಿದೆ. ಶಿವಮೊಗ್ಗ, ಶಿಕಾರಿಪುರ ಹಾಗೂ ಸಾಗರದಲ್ಲಿ ಅಹಿತಕರ ಘಟನೆ ನಡೆದಿರುವುದು ವರದಿಯಾಗಿದೆ.

ಓದಿ:ದಾವಣಗೆರೆ ಕಾಲೇಜಿನಲ್ಲಿ ಭುಗಿಲೆದ್ದ ಹಿಜಾಬ್ ವಿವಾದ: ಅಶ್ರುವಾಯು, ಲಘು ಲಾಠಿ ಪ್ರಹಾರ

Last Updated : Feb 8, 2022, 7:32 PM IST

For All Latest Updates

TAGGED:

ABOUT THE AUTHOR

...view details