ಮೈಸೂರು : ಹೆಲಿಕಾಪ್ಟರ್ ಪತನದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ವಿಧಾನ ಪರಿಷತ್ ಅಭ್ಯರ್ಥಿ, ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಹೆಲಿಕಾಪ್ಟರ್ ದುರಂತ ಉನ್ನತ ಮಟ್ಟದ ತನಿಖೆಯಾಗಬೇಕು: ವಾಟಾಳ್ ನಾಗರಾಜ್ - ಬಿಪಿನ್ ರಾವತ್ ಕುರಿತು ವಾಟಾಳ್ ನಾಗರಾಜ ಹೇಳಿಕೆ
ದೇಶದ ಮಹಾದಂಡನಾಯಕ ಜನರಲ್ ರಾವತ್ ನಿಧನ ಬಹಳ ನೋವನ್ನು ತಂದಿದೆ. ಹೆಲಿಕಾಪ್ಟರ್ ಪತನವಾಗಿರುವುದು ಎಲ್ಲರ ಮನಸ್ಸನ್ನು ನೋವಿನಿಂದ ಕೂಡಿಸಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.
ವಾಟಾಳ್ ನಾಗರಾಜ್
ನಗರದಲ್ಲಿ ಇಂದು ಚುನಾವಣಾ ಭ್ರಷ್ಟಾಚಾರ ನಿಲ್ಲಲಿ ಎಂದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ದೇಶದ ಮಹಾದಂಡನಾಯಕ ಜನರಲ್ ರಾವತ್ ನಿಧನ ಬಹಳ ನೋವು ತಂದಿದೆ. ರಾವತ್ ಅಪ್ರತಿಮ ದೇಶಭಕ್ತ ಮಹಾನ್ ವ್ಯಕ್ತಿ. ಭಾರತದ ಮಣ್ಣಿನ ಮಗ. ದಂಪತಿಗಳು ಸಾವು, ಕೆಲವು ಅಧಿಕಾರಿಗಳ ಸಾವು ದೇಶಕ್ಕೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆಲಿಕಾಪ್ಟರ್ ಪತನವಾಗಿರುವುದು ಎಲ್ಲರ ಮನಸ್ಸನ್ನು ನೋವಿನಿಂದ ಕೂಡಿಸಿದೆ. ಕಣ್ಣೀರಿನ ಕಥೆ. ಇದಾಗಬಾರದಾಗಿತ್ತು. ಹೆಲಿಕಾಪ್ಟರ್ ಪತನದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.
Last Updated : Dec 9, 2021, 3:18 PM IST