ಮೈಸೂರು:ಪ್ರಧಾನಿ ಮೋದಿ ಅವರು ಅರಮನೆ ಮೈದಾನದಲ್ಲಿ ಯೋಗಾಸನ ಮಾಡಿ ಬಳಿಕ ರಾಜವಂಶಸ್ಥರು ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಭಾಗಿಯಾಗಿ ಮೈಸೂರ್ ಪಾಕ್ ಜೊತೆ ಉಪಾಹಾರ ರುಚಿ ಸವಿದರು.
ರಾಜ ಮಾತಾ ಪ್ರಮೋದ ದೇವಿ ಒಡೆಯರ್ ಆಹ್ವಾನದ ಮೇರೆಗೆ ಪ್ರಧಾನಿ ಅವರು ಅರಮನೆಗೆ ಆಗಮಿಸಿ ರಾಜ ಮನೆತನದ ಉಪಾಹಾರ ಸ್ವೀಕರಿಸಿದರು. ಇಡ್ಲಿ-ಸಾಂಬಾರ್, ಬ್ರೆಡ್ ಬಟರ್, ಮಿಕ್ಸ್ ಫ್ರಂಟ್, ಅವಲಕ್ಕಿ ಹಾಗೂ ಕೇಸರಿಬಾತ್ ಉಪ್ಪಿಟ್ಟನ್ನು ಪ್ರಧಾನಿ ಸವಿದರು. ವಿಶೇಷವಾಗಿ ಮೈಸೂರಿನ ಪ್ರಸಿದ್ಧ ಸಿಹಿ 'ಮೈಸೂರು ಪಾಕ್' ರಚಿಯನ್ನು ಕೂಡ ನರೇಂದ್ರ ದಾಮೋದರ್ ದಾಸ್ ಮೋದಿ ಸವಿದರು. ಪ್ರಧಾನಿ ಮೋದಿ ಅವರೊಂದಿಗೆ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅರಮನೆ ಕುಟುಂಬಸ್ಥರು ಪಾಲ್ಗೊಂಡಿದ್ದರು. ಉಪಹಾರದ ಬಳಿಕ ಪ್ರಧಾನಿ ವಿಶೇಷ ವಿಮಾನದ ಮೂಲಕದ ದೆಹಲಿಗೆ ತೆರಳಿದರು. ಈ ಮೂಲಕ ಮೋದಿ ಅವರ ಎರಡು ದಿನದ ಬೆಂಗಳೂರು, ಮೈಸೂರು ಪ್ರವಾಸ ಪೂರ್ಣವಾಯಿತು.
(ಇದನ್ನೂ ಓದಿ: ಮೈಸೂರಲ್ಲಿ ಓಂಕಾರದೊಂದಿಗೆ ಮೋದಿ ಯೋಗಾಸನ : ವಿಡಿಯೋ)
ಸೋಮವಾರ ಸಂಜೆ ಮೈಸೂರಿಗೆ ಆಗಮಿಸಿದ್ದ ಮೋದಿ ಪ್ರಧಾನ ಮಂತ್ರಿ ಯೋಜನೆಯ ವಿವಿಧ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುತ್ತೂರು ಮಠ ಹಾಗೂ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಂಡರು. ಬಳಿಕ ಅರಮನೆ ಮುಂಭಾಗದ ವಸ್ತು ಪ್ರದರ್ಶನದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕುರಿತು ಏರ್ಪಡಿಸಿರುವ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿದರು. ವಸ್ತು ಪ್ರದರ್ಶನ ಆವರಣದಲ್ಲಿ ಆಯುಷ್ ಇಲಾಖೆ ವತಿಯಿಂದ ಯೋಗಕ್ಕೆ ಸಂಬಂಧಪಟ್ಟ ಮಾಹಿತಿಯ ಪ್ರಾತ್ಯಕ್ಷಿಕೆ ಒಳಗೊಂಡ ಡಿಜಿಟಲ್ ಮಳಿಗೆಗೆ ಚಾಲನೆ ಕೊಟ್ಟರು.
ಮೈಸೂರಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿದ ಪ್ರಧಾನಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಾನವೀಯತೆಗಾಗಿ ಯೋಗ, ಜೀವನ ಶೈಲಿ, ಆರೋಗ್ಯಯುತ ಬದುಕು, ವಿಶ್ರಾಂತಿ, ವ್ಯಾಯಾಮ ಹೀಗೆ ಹಲವು ಮಾಹಿತಿ... ಹಾಗೆಯೇ ಮಹಾವೀರ, ಗೌತಮ ಬುದ್ಧ, ಆದಿ ಶಂಕರಾಚಾರ್ಯ, ಮಹರ್ಷಿ ಪತಂಜಲಿ ಇತರರ ಕೊಡುಗೆ... ಹೀಗೆ ಆಯುಷ್ ಯೋಗಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಮಳಿಗೆಗಳು ಗಮನ ಸೆಳೆಯುತ್ತಿವೆ.
ಮೈಸೂರಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿದ ಪ್ರಧಾನಿ