ಮೈಸೂರು: ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ 1.15 ಕೋಟಿ ರೂ. ಮೊತ್ತದ 5 ಎಂ.ಎಲ್ ನ 99,000 ಅಳಿಸಲಾಗದ ಶಾಯಿಗಳಿಗೆ ಚುನಾವಣಾ ಆಯೋಗ ಬೇಡಿಕೆ ಇಟ್ಟಿದ್ದು, ಶಾಯಿ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ ಎಂದು ಮೈಲ್ಯಾಕ್ ಅಧ್ಯಕ್ಷ ಎನ್.ವಿ ಫಣೀಶ್ ತಿಳಿಸಿದ್ದಾರೆ.
ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್) ಅಧ್ಯಕ್ಷ ಎನ್.ವಿ ಫಣೀಶ್ ಸುದ್ದಿಗೋಷ್ಠಿ ನಡೆಸಿ ಕಂಪನಿಯ ವಹಿವಾಟಿನ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಎರಡನೇ ಹಂತದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗವು 99 ಸಾವಿರ ಅಳಿಸಲಾಗದ ಶಾಯಿ ಬಾಟಲ್ಗಳಿಗೆ ಬೇಡಿಕೆ ಇಟ್ಟಿತ್ತು. 2019-20 ನೇ ಸಾಲಿನಲ್ಲಿ ಕಂಪನಿ ಒಟ್ಟು 21.52 ಕೋಟಿ ರೂ. ವಹಿವಾಟು ನಡೆಸಿದ್ದು, 4.70 ರೂ. ಕೋಟಿ ಲಾಭ ಪಡೆದಿದೆ. ಹಾಗೂ ಕಂಪನಿಯ ಸಿಎಸ್ಆರ್ ಫಂಡ್ನಲ್ಲಿ 20.57 ಲಕ್ಷ ರೂಪಾಯಿಯನ್ನು ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಗೆ ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳಿಗೆ ವಿನಿಯೋಗ ಮಾಡಲಾಗಿದೆ. 2021 ಕ್ಕೆ 20 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಇದೆ ಎಂದು ಮಾಹಿತಿ ನೀಡಿದರು.