ಮೈಸೂರು: ಮೃತಹಿಂದೂ ಮಹಿಳೆಯೊಬ್ಬರ ಅಂತ್ಯಸಂಸ್ಕಾರವನ್ನ ಮುಸ್ಲಿಂಮರೆಲ್ಲ ಸೇರಿ ಮಾಡುವ ಮೂಲಕ ಸೌಹಾರ್ದತೆ ಪರಂಪರೆ, ಮಾನವೀಯತೆ ಇನ್ನೂ ಜೀವಂತೆ ಇದೆ ಅನ್ನೋದನ್ನ ಸಾರಿ ಹೇಳಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಇಲ್ಲಿನ ಗೌಸಿಯ ನಗರದ ನಿವಾಸಿ ಜಯಕ್ಕ (60) ಎಂಬುವರು ಅನಾರೋಗ್ಯದ ಕಾರಣ ಮೃತಪಟ್ಟಿದ್ದರು.
ಇವರು ಸುಮಾರು 40 ವರ್ಷಗಳಿಂದ ಇದೇ ಗೌಸಿಯನಗರದಲ್ಲಿ ವಾಸಿಸುತ್ತಿದ್ದರು. ಇವರಿಗೆ ಮಗ ಮತ್ತು ಸೊಸೆ ಇದ್ದು, ಬೇರೆ ಯಾರೂ ಸಂಬಂಧಿಕರಿರಲಿಲ್ಲ. ಹಾಗಾಗಿ, ಅಕ್ಕಪಕ್ಕದ ಮನೆಯ ಮುಸ್ಲಿಂಮರೇ ಜಯಕ್ಕ ಅವರ ಮಗ ಮತ್ತು ಸೊಸೆಯ ಸಹಾಯಕ್ಕೆ ಬಂದು ಶುಕ್ರವಾರ ಸಂಜೆ ಜಯಮ್ಮನವರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಗೌಸಿಯನಗರದ ಸುಮಾರು 3,000 ಮನೆಗಳ ನಡುವೆ ಇದೊಂದೇ ಕುಟುಂಬ ಹಿಂದೂ ಧರ್ಮದ್ದಾಗಿದೆ. ನಮ್ಮಲ್ಲಿ ಹಿಂದೂ-ಮುಸ್ಲಿಂ ಎನ್ನುವ ಬೇಧ- ಭಾವ ಇಲ್ಲ. ಎಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ನಮ್ಮ ಕಷ್ಟಗಳಿಗೆ ಹಿಂದೂಗಳು ಭಾಗಿಯಾಗುತ್ತಾರೆ. ಹಿಂದೂಗಳ ಕಷ್ಟಕ್ಕೆ ನಾವು ಭಾಗಿಯಾಗುತ್ತೇವೆ ಎಂದು ಮುಸ್ಲಿಂ ಬಾಂಧವರು ತಿಳಿಸಿದ್ದಾರೆ.