ಕರ್ನಾಟಕ

karnataka

ETV Bharat / city

ಮೈಸೂರು ಜಿಲ್ಲೆಯಲ್ಲಿ ಆಕ್ಸಿಜನ್​ ಕೊರತೆಯಿದೆ: ಸಚಿವ ಎಸ್.ಟಿ.ಸೋಮಶೇಖರ್ - ಮೈಸೂರು ಜಿಲ್ಲೆಯಲ್ಲಿ ಆಕ್ಸಿಜನ್​ ಕೊರತೆಯಿದೆ

ಕೋವಿಡ್ ವಿಚಾರದಲ್ಲಿ‌ ಜನರು ಪ್ಯಾನಿಕ್ ಆಗುತ್ತಿದ್ದಾರೆ. ಎಲ್ಲರಿಗೂ ಆಕ್ಸಿಜನ್ ಬೇಕು ಅಂದುಕೊಳ್ಳುತ್ತಿದ್ದಾರೆ. ಇದು ತಪ್ಪು. ಸಾಮಾನ್ಯವಾಗಿ ಮನೆಯಲ್ಲೇ ಚಿಕಿತ್ಸೆ ಪಡೆದರೆ ಈ ಸಮಸ್ಯೆ ತಪ್ಪಲಿದೆ. ಸಮಸ್ಯೆಯಾದವರಿಗೆ ಮಾತ್ರ ಆಕ್ಸಿಜನ್ ಬಳಸಿದರೆ ಒಳ್ಳೆಯದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

Mysore
ಸಚಿವ ಎಸ್.ಟಿ.ಸೋಮಶೇಖರ್

By

Published : May 5, 2021, 1:42 PM IST

ಮೈಸೂರು:ನಮಗೆ 48 ಕೆ.ಎಲ್ ಆಕ್ಸಿಜನ್ ಬೇಕು. ಆದರೆ ಜಿಲ್ಲೆಯಲ್ಲೀಗ ಕೇವಲ 19 ಕೆ.ಎಲ್​ ಆಕ್ಸಿಜನ್ ಇದೆ. ಸದ್ಯ ಆಕ್ಸಿಜನ್​ ಕೊರತೆಯಿದ್ದು, ಹೆಚ್ಚಿನ ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಆಕ್ಸಿಜನ್​ ಕೊರತೆಯಿದೆ: ಸಚಿವ ಎಸ್.ಟಿ.ಸೋಮಶೇಖರ್

ಚಾಮರಾಜ ಕ್ಷೇತ್ರದ ಅಧಿಕಾರಿಗಳ ಜೊತೆಗಿನ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಲಾಗುತ್ತದೆ. ಅಲ್ಲಿನ ಕಾರ್ಪೋರೇಟರ್​ಗಳಿಗೆ 5 ಲಕ್ಷ ಹಣ ನೀಡಿ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಯಾನಿಟೈಸ್ ಮಾಡಲು ಸೂಚಿಸುತ್ತೇವೆ. ಜೊತೆಗೆ ಕ್ಷೇತ್ರದ ಶಾಸಕರನ್ನು ಟಾಸ್ಕ್​​ ​ಫೋರ್ಸ್ ಸಮಿತಿಯ ಅಧ್ಯಕ್ಷರಾಗಿ ಮಾಡುತ್ತೇವೆ. ಈ ಶಾಸಕರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಕೋವಿಡ್ ವಿಚಾರದಲ್ಲಿ‌ ಜನರು ಪ್ಯಾನಿಕ್ ಆಗುತ್ತಿದ್ದಾರೆ. ಎಲ್ಲರಿಗೂ ಆಕ್ಸಿಜನ್ ಬೇಕು ಅಂದುಕೊಳ್ಳುತ್ತಿದ್ದಾರೆ. ಇದು ತಪ್ಪು. ಸಾಮಾನ್ಯವಾಗಿ ಮನೆಯಲ್ಲೇ ಚಿಕಿತ್ಸೆ ಪಡೆದರೆ ಈ ಸಮಸ್ಯೆ ತಪ್ಪಲಿದೆ. ಸಮಸ್ಯೆಯಾದವರಿಗೆ ಮಾತ್ರ ಆಕ್ಸಿಜನ್ ಬಳಸಿದರೆ ಒಳ್ಳೆಯದು ಎಂದರು.

ಓದಿ:ಆರೋಪಗಳಿಂದ ಬಹಳ ನೊಂದಿದ್ದೇನೆ: ಭಾವುಕರಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ABOUT THE AUTHOR

...view details