ಕರ್ನಾಟಕ

karnataka

ETV Bharat / city

ಸಚಿವ ಸ್ಥಾನ ಕೊಟ್ಟರೆ ಶಕ್ತಿ ಮೀರಿ ನಿಭಾಯಿಸುತ್ತೇನೆ: ಯತೀಂದ್ರ ಸಿದ್ದರಾಮಯ್ಯ - ಸಚಿವ ಸ್ಥಾನ

ನನಗೆ ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸ್ಥಾನ ಬಂದರೂ ನಿಭಾಯಿಸುತ್ತೇನೆ, ಪಕ್ಷ ಕೊಟ್ಟಾಗ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನನಗೆ ಮಂತ್ರಿ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ‌ವಿಚಾರ ಎಂದು ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ

By

Published : Feb 18, 2019, 2:15 PM IST

ಮೈಸೂರು: ನನಗೆ ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸ್ಥಾನ ಬಂದರೂ ನಿಭಾಯಿಸುತ್ತೇನೆ ಎಂದು ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ವರುಣ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಲು ಪತ್ರಕರ್ತರ ಭವನದಲ್ಲಿ‌ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಬಳಿಕ ತಾವು ಮಂತ್ರಿ‌ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ಸ್ಥಾನ ಬಂದರು ನಿಭಾಯಿಸುತ್ತೇನೆ. ಪಕ್ಷ ಕೊಟ್ಟಾಗ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನನಗೆ ಮಂತ್ರಿ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ‌ವಿಚಾರ ಎಂದರು.

ಯತೀಂದ್ರ ಸಿದ್ದರಾಮಯ್ಯ

ಶಾಸಕರಾದ ಮೇಲೆ‌ ವರುಣ ಸ್ಥಳೀಯ ಕಾರ್ಯಕರ್ತರಿಗೆ ತಾವು ಸಿಗುತ್ತಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆಯ ಕಾರ್ಯಕ್ರಮದಲ್ಲಿ‌ ಜಮಲಾರ್ ಪ್ರಕರಣವಾದ ನಂತರ ಈ ರೀತಿ ಅಪಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಜನರು ತಲೆಕೆಡಿಸಿಕೊಳ್ಳಬಾರದು. ಇದೊಂದು ತಪ್ಪು‌ ಕಲ್ಪನೆಯಾಗಿದ್ದು, ವಾರದಲ್ಲಿ 3-4 ದಿನ ಕ್ಷೇತ್ರದಲ್ಲೇ ಇರುತ್ತೇನೆ ಎಂದರು.

ನಮ್ಮ ಕ್ಷೇತ್ರದ ತಾಂಡವಪುರದಲ್ಲಿ ಪಕ್ಷದ ವತಿಯಿಂದ ಉದ್ಯೋಗ ಮೇಳವನ್ನ ಆಯೋಜನೆ ಮಾಡಲಾಗಿದ್ದು, ನಿರುದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ ಯತೀಂದ್ರ ಸಿದ್ದರಾಮಯ್ಯ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡುವುದಾಗಿ ತಿಳಿಸಿದರು.

ABOUT THE AUTHOR

...view details