ಮೈಸೂರು :ಕೋವಿಡ್ ಸಂಕಷ್ಟ ಹಾಗೂ ಇತರೆ ಕಾರಣಗಳಿಂದ ಚಿತ್ರಮಂದಿರಗಳು ಒಂದೊಂದಾಗಿ ಮೈಸೂರಿನಲ್ಲಿ ಬಂದ್ ಆಗುತ್ತಿವೆ. ಇದರ ಬಗ್ಗೆ ಚಲನಚಿತ್ರ ಪ್ರದರ್ಶಕ ಮಂಡಳಿಯ ಉಪಾಧ್ಯಕ್ಷ ರಾಜಾರಾಂ ಚಿತ್ರಮಂದಿರಗಳು ಮುಚ್ಚಲು ಕಾರಣವೇನು ಎಂಬುದರ ಬಗ್ಗೆ ವಿವರಿಸಿದ್ದಾರೆ.
ರಾಜ್ಯದಲ್ಲಿ ಸಿಂಗಲ್ ಸ್ಕ್ರೀನ್ ಇರುವ 634 ಚಿತ್ರಮಂದಿರಗಳಲ್ಲಿ ಕಳೆದ 2 ವರ್ಷಗಳಿಂದ ಸುಮಾರು 40ಕ್ಕೂ ಹೆಚ್ಚು ಚಿತ್ರಮಂದಿರಗಳು ಹಲವಾರು ಸಂಕಷ್ಟಗಳಿಂದ ಬಂದ್ ಆಗಿವೆ. ಈಗ ರಾಜ್ಯದಲ್ಲಿ 587 ಚಿತ್ರಮಂದಿರಗಳು ಮಾತ್ರ ಉಳಿದಿವೆ.
ಅಧಿಕ ತೆರಿಗೆ, ಕೋವಿಡ್ನಿಂದ ರಾಜ್ಯದಲ್ಲಿ ಚಿತ್ರಮಂದಿಗಳು ಬಾಗಿಲು ಹಾಕ್ತಿವೆ : ರಾಜಾರಾಂ ಅದರಂತೆ ಮೈಸೂರಿನಲ್ಲೂ 4 ಚಿತ್ರಮಂದಿರಗಳು ಬಾಗಿಲು ಹಾಕಿವೆ. ಚಿತ್ರಮಂದಿರಗಳಿಗೆ ವಿಧಿಸುವ ಅಧಿಕ ತೆರಿಗೆ ಜೊತೆಗೆ ಕೋವಿಡ್ನಿಂದ ಸಿನಿಮಾ ಪ್ರದರ್ಶನ ನಿಂತಿದ್ದು ಕೂಡ ಕಾರಣ ಎಂದಿದ್ದಾರೆ.
ಇದನ್ನೂ ಓದಿ:ಮಾರ್ಚ್ 28 ರಿಂದ SSLC ಪರೀಕ್ಷೆ : ಅಂತಿಮ ವೇಳಾಪಟ್ಟಿ ಪ್ರಕಟ
ಮೈಸೂರು ನಗರದಲ್ಲಿ ಅತಿ ಹೆಚ್ಚು ತೆರಿಗೆಯನ್ನು ಸಿನಿಮಾ ಮಂದಿರಗಳ ಮೇಲೆ ವಿಧಿಸಿದ್ದು, ಆದಾಯಕ್ಕಿಂತ ತೆರಿಗೆಯೇ ಜಾಸ್ತಿಯಾಗಿದೆ. ಇದರ ಜೊತೆಗೆ ವಿದ್ಯುತ್ ವೆಚ್ಚ, ಮಲ್ಟಿಪ್ಲೆಕ್ಸ್ಗಳ ಪೈಪೋಟಿ ಜೊತೆಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಹಾಗೂ ಸಹಾಯ ದೊರೆಯದೆ ಇರುವುದು ಚಿತ್ರ ಮಂದಿರ ಮುಚ್ಚಲು ಕಾರಣವಾಗಿದೆ. ಇದೇ ರೀತಿ ಮುಂದುವರೆದರೆ ರಾಜ್ಯಾದ್ಯಂತ ಇನ್ನಷ್ಟು ಚಿತ್ರಮಂದಿರಗಳು ಬಂದ್ ಆಗಲಿವೆ ಎಂದು ಹೇಳಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ