ಮೈಸೂರು :ಅನಗತ್ಯವಾಗಿ ರೋಡಿಗಿಳಿದು ಸುಳ್ಳು ಹೇಳಿ ತಗ್ಲಾಕೊಂಡ ಕಾಲೇಜು ವಿದ್ಯಾರ್ಥಿಗೆ ಕಾರಣ ಕೇಳಿ ಪೊಲೀಸರು ಬೈಕ್ ಸೀಜ್ ಮಾಡಿರುವ ಘಟನೆ ನಡೆದಿದೆ.
ಇವತ್ತು ಟ್ಯೂಸ್ಡೇ ಸಾರ್ ಅಂದ.. ನಿನ್ಯಾವ್ ವಿದ್ಯಾರ್ಥಿನಯ್ಯ ಎಂದರು ಪೊಲೀಸರು.. ಸುಳ್ಳು ಹೇಳಿ ತಗ್ಲಾಕೊಂಡ.. - ಕೊರೊನಾ ಕಪ್ಯೂ೯ ಹಿನ್ನೆಲೆ
ಇಂದು ಕಾಲೇಜ್ ಇತ್ತು, ಕಾಲೇಜಿಗೆ ಹೋಗಿದ್ದೆ ಸಾರ್ ಎಂದಿದ್ದಾನೆ. ಇವತ್ತು ಯಾವ ವಾರ ಎಂದು ಪ್ರಶ್ನಿಸಿದ ಪೊಲೀಸರಿಗೆ, ಇವತ್ತು ಟ್ಯೂಸ್ಡೇ (ಮಂಗಳವಾರ) ಸಾರ್..
ಸುಳ್ಳು ಹೇಳಿ ತಗ್ಲಾಕೊಂಡ ಕಾಲೇಜು ಯುವಕ
ಕೊರೊನಾ ಕಪ್ಯೂ೯ ಹಿನ್ನೆಲೆ ಕೆ.ಆರ್.ವೃತ್ತದಲ್ಲಿ ಪೊಲೀಸರು ತಪಾಸಣೆ ಮಾಡುತ್ತಿದ್ದಾಗ ಏಕೆ ಓಡಾಡುತ್ತಿದ್ದೀಯ ಎಂದು ಪೊಲೀಸರು ಪ್ರಶ್ನಿಸಿದ್ದಾರೆ.
ಇಂದು ಕಾಲೇಜ್ ಇತ್ತು, ಕಾಲೇಜಿಗೆ ಹೋಗಿದ್ದೆ ಸಾರ್ ಎಂದಿದ್ದಾನೆ. ಇವತ್ತು ಯಾವ ವಾರ ಎಂದು ಪ್ರಶ್ನಿಸಿದ ಪೊಲೀಸರಿಗೆ, ಇವತ್ತು ಟ್ಯೂಸ್ಡೇ (ಮಂಗಳವಾರ) ಸಾರ್ ಎಂದು ಯುವಕ ಹೇಳಿದ್ದಾನೆ.
ಇದರಿಂದ ಕೋಪಗೊಂಡು, ಯಾವ ದಿನ ಅಂತ ಗೊತ್ತಿಲ್ಲದೆ ಯಾವ ಕಾಲೇಜಿಗೆ ಹೋಗ್ತಿಯಾ ನೀನು ಎಂದು ಪೊಲೀಸರು ಗದರಿದ್ದಾರೆ. ಸುಳ್ಳು ಮಾಹಿತಿ ನೀಡಿದ ಮೇರೆಗೆ ಯುವಕನ ಬೈಕ್‌ನ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.