ಕರ್ನಾಟಕ

karnataka

ಮೈಸೂರಿನ ಚಾಮುಂಡೇಶ್ವರಿ ವರ್ಧಂತಿಗೆ ಚಾಲನೆ

By

Published : Jul 20, 2022, 2:16 PM IST

ಇಂದು ಚಾಮುಂಡೇಶ್ವರಿ ವರ್ಧಂತಿ(ಜನ್ಮದಿನೋತ್ಸವ) ಪ್ರಯುಕ್ತ ರಾಜವಂಶಸ್ಥರು ಚಿನ್ನದ ಪಲ್ಲಕ್ಕಿಯ ಉತ್ಸವಕ್ಕೆ ಚಾಲನೆ ನೀಡಿದರು.

Vardhanti of Goddess Chamundeshwari
ಮೈಸೂರಿನ ಚಾಮುಂಡೇಶ್ವರಿ ವರ್ಧಂತಿಗೆ ಚಾಲನೆ

ಮೈಸೂರು:ಚಾಮುಂಡಿ ತಾಯಿಯ ವರ್ಧಂತಿ (ಹುಟ್ಟುಹಬ್ಬ) ಪ್ರಯುಕ್ತ ಇಂದು ಚಾಮುಂಡಿ ಬೆಟ್ಟಕ್ಕೆ ರಾಜ ವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಆಗಮಿಸಿ ನಾಡ ಅಧಿದೇವತೆ ಚಾಮುಂಡಿ ತಾಯಿ ಆಸಿನರಾಗಿರುವ ಚಿನ್ನದ ಪಲ್ಲಕ್ಕಿಯ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಭಕ್ತರು ಚಿನ್ನದ ಪಲ್ಲಕ್ಕಿಯಲ್ಲಿರುವ ತಾಯಿಗೆ ಪೂಜೆ ಸಲ್ಲಿಸಿದರು.


ಈ ವೇಳೆ ಮಾತನಾಡಿದ ಯದುವೀರ್, ಇದೇ ದಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಆದ್ದರಿಂದ ಈ ದಿನದಂದು ಚಾಮುಂಡೇಶ್ವರಿಯ ವರ್ಧಂತಿ ಆಚರಿಸುತ್ತೇವೆ. ಕೋವಿಡ್ ಹಿನ್ನೆಲೆಯಲ್ಲಿ 2 ವರ್ಷಗಳ ಬಳಿಕ ಉತ್ಸವ ಮೂರ್ತಿ ಚಾಮುಂಡಿ ತಾಯಿ ದೇವಸ್ಥಾನದ ಹೊರಭಾಗಕ್ಕೆ ಬಂದು ಉತ್ಸವ ನಡೆಯುತ್ತಿರುವುದು ಸಂತೋಷವಾಗಿದೆ. ನಾಡಿನ ಜನತೆಗೆ ಸುಖ, ಸಮೃದ್ಧಿ ಆರೋಗ್ಯಯನ್ನು ನೀಡಲಿ ಎಂದು ಚಾಮುಂಡಿ ತಾಯಿಯನ್ನು ಪ್ರಾರ್ಥಿಸುತ್ತೇವೆ ಎಂದರು.

ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ಈ ವರ್ಷ ವರ್ಧಂತಿ ನಡೆಯುತ್ತಿರುವುದು ತುಂಬಾ ಸಂತೋಷವಾಗಿದೆ. ಜನರಿಗೂ ತಾಯಿಯ ದರ್ಶನ ಈ ಬಾರಿ ಸಿಗುತ್ತಿದೆ. ಎಲ್ಲ ಕಡೆ ಹೆಚ್ಚು ಮಳೆಯಾಗಿದ್ದು, ಜನರಿಗೆ ಸುಖ ಶಾಂತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ರಾಜ್ಯದಲ್ಲಿ 'ಟೆಂಟ್‌ ಟೂರಿಸಂ': ಮೈಸೂರಿನ ಲಲಿತ ಮಹಲ್ ಹೋಟೆಲ್ ಆವರಣ ಆಯ್ಕೆ

ABOUT THE AUTHOR

...view details