ಮೈಸೂರು: ನಂಜನಗೂಡಿನ ಶ್ರೀಕಂಟೇಶ್ವರಸ್ವಾಮಿ ದೇವಾಲಯದಲ್ಲಿರುವ ಯಾವುದೇ ವಿಗ್ರಹಗಳು ನಾಪತ್ತೆಯಾಗಿಲ್ಲ. ಅಷ್ಟಬಂಧನವಿಲ್ಲದೆ ಶಿಥಿಲಾವಸ್ಥೆಯಲ್ಲಿದ್ದ ಭದ್ರಕಾಳಿ ವಿಗ್ರಹವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಸ್ಪಷ್ಟಪಡಿಸಿದ್ದಾರೆ.
ಭದ್ರಕಾಳಿ ವಿಗ್ರಹವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ: ಇಒ ರವೀಂದ್ರ - ಮೈಸೂರು
'ಅಷ್ಟಬಂಧನವಿಲ್ಲದೆ ಶಿಥಿಲಾವಸ್ಥೆಯಲ್ಲಿದ್ದ ಭದ್ರಕಾಳಿ ವಿಗ್ರಹವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ' - ಇಒ ರವೀಂದ್ರ ಸ್ಪಷ್ಟನೆ
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೀಲಾ ಮೂರ್ತಿ ಸಾಲಿನಲ್ಲಿ ವೀರಭದ್ರ ಮತ್ತು ಭದ್ರಕಾಳಿ ವಿಗ್ರಹಗಳಿದ್ದು, ಭದ್ರಕಾಳಿ ವಿಗ್ರಹ ಭಿನ್ನವಾಗಿರುವುದು ಪೂಜಾ ಸಮಯದಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಭದ್ರಕಾಳಿ ವಿಗ್ರಹವನ್ನು ಶೈವಾಗಮ ಪದ್ಧತಿಯಂತೆ ತಕ್ಷಣವೇ ಕಳಾಕರ್ಷಣೆ ಮಾಡಿ ದೇವಸ್ಥಾನದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ತಿಳಿಸಿದರು.
ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಅವಗಾಹನೆಗೆ ಸಲ್ಲಿಸಲಾಗಿದೆ. ವಿಗ್ರಹದ ಜತೆ ಒಳಾವರಣದಲ್ಲಿರುವ ಸುತ್ತಲೂ ಗುಡಿಯ 24 ಸಾಲು ವಿಗ್ರಹಗಳಿಗೆ ಅಷ್ಟಬಂಧನ ಕಾರ್ಯ ನಡೆಸಲು ಕೇಂದ್ರೀಯ ಪುರಾತತ್ವ ಇಲಾಖೆಯ ಅನುಮತಿ ಪಡೆಯುವ ವಿಚಾರದಲ್ಲಿ ಕಾರ್ಯ ಪ್ರವೃತ್ತರಾಗಿದ್ದು, ಕೂಡಲೇ ಭದ್ರಕಾಳಿ ವಿಗ್ರಹವನ್ನು ಯಥಾಸ್ಥಿತಿ ಪ್ರತಿಷ್ಠಾಪಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.