ಕರ್ನಾಟಕ

karnataka

ETV Bharat / city

ಅಂಬೇಡ್ಕರ್ ಪ್ರತಿಮೆ ತೆರವು : ಕತ್ತು‌‌ ಕೊಯ್ದುಕೊಂಡ ಅಭಿಮಾನಿ - ಜಯಲಕ್ಷ್ಮಿಪುರಂ ಮಾತೃಮಂಡಳಿ ಶಾಲೆ

ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಾತೃಮಂಡಳಿ ವೃತ್ತದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ಹಿರಿಯ ಪೊಲೀಸ್ ಅಧಿಕಾರಿಗಳು, ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೊಕ್ಕಾಂ ಹೂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ..

Ambedkar statue evacuated
ಅಂಬೇಡ್ಕರ್ ಪ್ರತಿಮೆ ತೆರವು

By

Published : Dec 4, 2021, 12:01 PM IST

Updated : Dec 4, 2021, 12:14 PM IST

ಮೈಸೂರು: ಜಿಲ್ಲೆಯ ಜಯಲಕ್ಷ್ಮಿಪುರಂ ಮಾತೃಮಂಡಳಿ ಶಾಲೆ ವೃತ್ತದಲ್ಲಿ ರಾತ್ರೋರಾತ್ರಿ ಸ್ಥಾಪನೆ ಮಾಡಿದ್ದ ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಿದ ಹಿನ್ನೆಲೆ ಅಭಿಮಾನಿಯೊಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಹೂಟಗಳ್ಳಿ ನಿವಾಸಿ ಸತೀಶ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಕೆ.ಆರ್.ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಮೆ ತೆರವುಗೊಳಿಸಿದ ವಿಚಾರವಾಗಿ ಯುವಕರ ತಂಡವೊಂದು ಪೊಲೀಸರೊಂದಿಗೆ ಮಾತನ ಚಕಮಕಿ ನಡೆಸಿದೆ. ಈ ವೇಳೆ ಯುವಕರು ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಜಯಲಕ್ಷ್ಮಿಪುರಂ ಮಾತೃಮಂಡಳಿ ಶಾಲೆ ಬಳಿ ಬಿಗಿ ಪೊಲೀಸ್ ಭದ್ರತೆ..

ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಾತೃಮಂಡಳಿ ವೃತ್ತದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ಹಿರಿಯ ಪೊಲೀಸ್ ಅಧಿಕಾರಿಗಳು, ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೊಕ್ಕಾಂ ಹೂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.

Last Updated : Dec 4, 2021, 12:14 PM IST

ABOUT THE AUTHOR

...view details