ಕರ್ನಾಟಕ

karnataka

ETV Bharat / city

ಗೃಹ ಖಾತೆ ಕೊಟ್ಟರೆ ನಿಭಾಯಿಸುವೆ : ಕೃಷಿ ಸಚಿವ ಬಿ.ಸಿ.ಪಾಟೀಲ್ - ಮೈಸೂರಿನಲ್ಲಿ ಬಿಸಿ ಪಾಟೀಲ್ ವಾಗ್ದಾಳಿ

ರಾಜ್ಯದಲ್ಲಿ ಬಿಜೆಪಿಯಿಂದ ಗಲಾಟೆ ಎಂಬ ಕಾಂಗ್ರೆಸ್ ಆರೋಪದ ವಿಚಾರವಾಗಿ ಮಾತನಾಡಿದ ಬಿ.ಸಿ.ಪಾಟೀಲ್, ಎಲ್ಲಿ ಗಲಭೆಯಾಗಿದೆ? ಹುಬ್ಬಳ್ಳಿಯಲ್ಲಿ ಪೊಲೀಸರು ಗಲಭೆಯನ್ನ ಸಮರ್ಥವಾಗಿ‌ ನಿಭಾಯಿಸಿದ್ದಾರೆ ಎಂದು ಹೇಳಿದರು..

agriculture-minister-bc-patil-on-home-ministry
ಗೃಹಮಂತ್ರಿ ಖಾತೆ ಕೊಟ್ಟರೆ ನಿಭಾಯಿಸುವೆ: ಕೃಷಿ ಸಚಿವ ಬಿ.ಸಿ.ಪಾಟೀಲ್

By

Published : Apr 22, 2022, 10:12 AM IST

ಮೈಸೂರು :ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರಗ ಜ್ಞಾನೇಂದ್ರ ಅವರು ಗೃಹ ಖಾತೆ ನಿಭಾಯಿಸುತ್ತಿದ್ದಾರೆ. ಅವರ ಕೆಲಸ ವಿಚಾರವಾಗಿ ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ಒಂದು ಖಾತೆ ಬದಲಾವಣೆಯಾಗಿ, ನನಗೆ ಗೃಹ ಖಾತೆ ಕೊಟ್ಟರೆ ನಿಭಾಯಿಸುವೆ ಎಂದರು.

ರಾಜ್ಯದಲ್ಲಿ ಬಿಜೆಪಿಯಿಂದ ಗಲಾಟೆ ಎಂಬ ಕಾಂಗ್ರೆಸ್ ಆರೋಪದ ವಿಚಾರವಾಗಿ ಮಾತನಾಡಿದ ಬಿ.ಸಿ.ಪಾಟೀಲ್, ಎಲ್ಲಿ ಗಲಭೆಯಾಗಿದೆ? ಹುಬ್ಬಳ್ಳಿಯಲ್ಲಿ ಪೊಲೀಸರು ಗಲಭೆಯನ್ನ ಸಮರ್ಥವಾಗಿ‌ ನಿಭಾಯಿಸಿದ್ದಾರೆ ಎಂದು ಹೇಳಿದರು. ಕೇಂದ್ರ ಹಾಗೂ ರಾಜ್ಯ‌ ಸರ್ಕಾರದಿಂದ ರೈತರ ಜೀವನ ಹಾಳಾಗುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರೈತರಿಗೆ ತೊಂದರೆಯಾಗಬಾರದು ಎಂದು ಕೇಂದ್ರ ಸರ್ಕಾರ 6 ಸಾವಿರ, ರಾಜ್ಯ ಸರ್ಕಾರ 4 ಸಾವಿರ ಕೊಡುತ್ತಿದೆ.

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಇಂತಹ ಕೆಲಸ ಮಾಡಿದ್ದಾರಾ? ಸಿದ್ದರಾಮಯ್ಯ ಅವರಿಗೆ ಟೀಕೆ ಮಾಡುವುದೇ ಕೆಲಸವಾಗಿದೆ ಎಂದು ಹರಿಹಾಯ್ದರು. ಇದರ ಜೊತೆಗೆ ರೈತರಿಗೆ ಬಿತ್ತನೆ ಬೀಜದ ಕೊರತೆಯಾಗದಂತೆ ಕೃಷಿ ಇಲಾಖೆ ಕೆಲಸ ಮಾಡುತ್ತಿದೆ. ರಸಗೊಬ್ಬರ ನಕಲಿ ಮಾರಾಟ ಮಾಡುವವರ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ:2nd PUC ಪರೀಕ್ಷೆ ಬರೆಯಲಿರುವ ಅಭಿಷೇಕ ಹಿರೇಮಠ್‌ : ಪೊಲೀಸ್ ಬಿಗಿ ಬಂದೋಬಸ್ತ್

ABOUT THE AUTHOR

...view details