ಮಂಗಳೂರು:ಬೈಕ್ ಸವಾರನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೈಕ್ ಸವಾರನ ಸುಲಿಗೆ: ಮಂಗಳಮುಖಿಯ ಬಂಧನ - Third Gender arrested in mangaluru
ಮಂಗಳೂರಲ್ಲಿ ಬೈಕ್ ಅಡ್ಡಗಟ್ಟಿ ಚಿನ್ನದ ಸರ ಸುಲಿಗೆ ಮಾಡಿದ್ದ ಮಂಗಳಮುಖಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಇಜಿಪುರದಲ್ಲಿ ವಾಸವಿರುವ ಅಭಿಷೇಕ್ ಯಾನೆ ಗೊಂಬೆ ಯಾನೆ ಅನಾಮಿಕ ಬಂಧಿತ ಆರೋಪಿ. ಮಂಗಳೂರಿನ ನಂತೂರು ಪದವು ಬಳಿ ಇರುವ ಬಿಎಸ್ಎನ್ಎಲ್ ಎಕ್ಸ್ ಚೇಂಜ್ ಬಳಿ ಬೈಕ್ನಲ್ಲಿ ಬರುತ್ತಿದ್ದ ಗಣೇಶ್ ಶೆಟ್ಟಿ ಎಂಬಾತನನ್ನು ತಡೆದು ಮುಖಕ್ಕೆ ಪೆಪ್ಪರ್ ಸ್ಪ್ರೆ ಬಳಸಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಆರೋಪಿ ಸುಲಿಗೆ ಮಾಡಿದ್ದ.
ಈ ಬಗ್ಗೆ ಗಣೇಶ್ ಶೆಟ್ಟಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಭಿಷೇಕ್ನನ್ನು ಬಂಧಿಸಿದ್ದಾರೆ. ಆರೋಪಿಯು ಮೂರು ಚಿನ್ನದ ಸರ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಆತನಿಂದ 71 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.