ಮಂಗಳೂರು: ತಾಲೂಕಿನ ಮಳಲಿಯ ಮಸೀದಿಯ ನವೀಕರಣ ಕಾಮಗಾರಿ ವೇಳೆ ಹಿಂದೂ ದೇವಾಲಯದ ಶೈಲಿಯ ಕೆತ್ತನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ಸತ್ಯ ತಿಳಿಯಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಮಳಲಿ ಮಸೀದಿಯ ನವೀಕರಣದ ವೇಳೆ ಪತ್ತೆಯಾಗಿರುವ ಶೈಲಿಯಿಂದ ಹಿಂದೂ ದೇವಾಲಯವೇ, ದರ್ಗಾವೇ ಅಥವಾ ಬಸದಿಯೇ ಎಂಬ ಬಗ್ಗೆ ತಿಳಿದುಕೊಳ್ಳಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ.
ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಲು ಚಿಂತನೆ: ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ನವೀಕರಣ ಕಾಮಗಾರಿ ವೇಳೆ ಹಿಂದೂ ದೇವಾಲಯ ಶೈಲಿಯ ವಸ್ತುಗಳು ಪತ್ತೆಯಾದ ತಕ್ಷಣ ಮಂಗಳೂರು ತಹಶೀಲ್ದಾರ್, ದರ್ಗಾ ನವೀಕರಣ ಕಾಮಗಾರಿ ಸ್ಥಗಿತಗೊಳಿಸಲು ಸೂಚನೆ ನೀಡಿದ್ದರು. ಆ ಬಳಿಕ ನ್ಯಾಯಾಲಯದಿಂದಲೂ ದರ್ಗಾ ನವೀಕರಣ ಕಾಮಗಾರಿಗೆ ತಡೆಯಾಜ್ಞೆ ಬಂದಿತ್ತು. ಆ ಬಳಿಕ ದರ್ಗಾದ ಕಾಮಗಾರಿ ಸ್ಥಗಿತಗೊಂಡಿದ್ದು, ದರ್ಗಾ ಇರುವ ಪ್ರದೇಶದ ಮೂಲ ಭೂ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.