ಮಂಗಳೂರು:ಮೊದಲ ಹಂತದ ಲಸಿಕೆ ಕಡ್ಡಾಯ ಪಡೆದುಕೊಂಡರೆ ಮಾತ್ರ ಶಾಲಾ-ಕಾಲೇಜಿಗೆ ಪ್ರವೇಶ, ಆ ಬಳಿಕವೇ ಶಾಲೆ ತೆರೆಯಲಾಗುತ್ತದೆ ಎಂಬ ರಾಜ್ಯ ಸಚಿವರ ಹೇಳಿಕೆಯನ್ನು ಪ್ರಶ್ನಿಸಿ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಸರ್ಕಾರಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ವ್ಯಾಕ್ಸಿನೇಷನ್ ಬಳಿಕವೇ ವಿದ್ಯಾರ್ಥಿಗಳಿಗೆ ಶಾಲೆ ಪ್ರವೇಶ: ಸರ್ಕಾರಕ್ಕೆ ಡಾ.ಕಕ್ಕಿಲ್ಲಾಯ ಲೀಗಲ್ ನೋಟಿಸ್ - ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟಿಸ್
ಕೋವಿಲ್ ಲಸಿಕೆಯ ಮೊದಲ ಡೋಸ್ ಪಡೆದರಷ್ಟೇ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿಗೆ ಪ್ರವೇಶ ಎಂಬ ಸಚಿವರ ಹೇಳಿಕೆ ಸಂಬಂಧ ಸರ್ಕಾರಕ್ಕೆ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಕೋರ್ಟ್ ಮೂಲಕ ನೋಟಿಸ್ ಕಳುಹಿಸಿದ್ದಾರೆ.
ವ್ಯಾಕ್ಸಿನೇಷನ್ ಬಳಿಕವೇ ವಿದ್ಯಾರ್ಥಿಗಳಿಗೆ ಶಾಲೆ ಪ್ರವೇಶ: ಸರ್ಕಾರಕ್ಕೆ ಡಾ.ಕಕ್ಕಿಲ್ಲಾಯ ಲೀಗಲ್ ನೋಟಿಸ್
ಗುಜರಾತ್ ಹಾಗೂ ಮೇಘಾಲಯ ಹೈಕೋರ್ಟ್‌ಗಳು ಯಾವುದೇ ಕಾರಣಕ್ಕೆ ಯಾರಿಗೂ ಒತ್ತಾಯಪೂರ್ವಕವಾಗಿ ಲಸಿಕೆ ನೀಡಬಾರದು ಎಂಬ ತೀರ್ಪುಗಳ ಆಧಾರದ ಮೇಲೆ ಈ ನೋಟಿಸ್ ಕಳುಹಿಸಿದ್ದಾರೆ. ಆದರೂ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಲಸಿಕೆ ಕಡ್ಡಾಯವನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ನ್ಯಾಯಾಲಯದ ಆದೇಶ ಪ್ರತಿ ಸಹಿತ ನೋಟಿಸ್ ಕಳುಹಿಸಲಾಗಿದೆ. ಆ ಬಳಿಕವೂ ಸರ್ಕಾರದ ಈ ಬಗ್ಗೆ ಕ್ರಮ ವಹಿಸದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ಆದೇಶ ಉಲ್ಲಂಘನೆ ಕೇಸ್ ದಾಖಲಾಗಿಸಲಾಗುತ್ತದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ತಿಳಿಸಿದ್ದಾರೆ.