ಮಂಗಳೂರು: ದುಬೈನಿಂದ ಮಂಗಳೂರಿಗೆ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದ್ದಾರೆ. ಕೇರಳದ ಕಾಸರಗೋಡು ಮೂಲದ ಪ್ರಯಾಣಿಕನೋರ್ವ ನಿನ್ನೆ(ಶನಿವಾರ) ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿದ್ದ.
ದುಬೈನಿಂದ ಮಂಗಳೂರಿಗೆ ಚಿನ್ನ ಕಳ್ಳ ಸಾಗಣೆ: 32 ಲಕ್ಷ ಮೌಲ್ಯದ ಚಿನ್ನ ವಶಕ್ಕೆ
ದುಬೈನಿಂದ ಮಂಗಳೂರಿಗೆ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನವನ್ನು ಪತ್ತೆ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು ಆರೋಪಿ ಹಾಗೂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದಿರುವ ಚಿನ್ನ
ಈತನನ್ನು ತಪಾಸಣೆ ನಡೆಸಿದಾಗ ಈತನ ಬಳಿ ಕಂದು ಬಣ್ಣದ ಕಾರ್ಟೂನ್ ಬಾಕ್ಸ್ನಲ್ಲಿ ಪೌಡರ್ ರೂಪದಲ್ಲಿ ಚಿನ್ನ ದೊರೆತಿದೆ. 24 ಕ್ಯಾರೆಟ್ ಪರಿಶುದ್ಧತೆಯ 624 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 32,72,880 ರೂ. ಎಂದು ಅಂದಾಜಿಸಲಾಗಿದೆ. ಸದ್ಯ ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದಿರುವ ಕಸ್ಟಮ್ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಭಟ್ಕಳದಲ್ಲಿ ಪೊಲೀಸ್ ಕ್ವಾರ್ಟರ್ಸ್ಗೆ ನುಗ್ಗಿದ ಮುಸುಕುಧಾರಿಗಳು: ಕಾನ್ಸ್ಟೇಬಲ್ ಪತ್ನಿಗೆ ಚಾಕು ತೋರಿಸಿ ದರೋಡೆ